ಸಚಿವ ಎಂ.ಬಿ.ಪಾಟೀಲರಿಗೆ ಅದ್ದೂರಿ ಸ್ವಾಗತ

ವಿಜಯಪುರ : ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ವಿಜಯಪುರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಎಂ.ಬಿ. ಪಾಟೀಲರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೃದಯಸ್ಪರ್ಶಿ ಹಾಗೂ ಅದ್ದೂರಿಯಾಗಿ ಸ್ವಾಗತಿಸಿದರು.


ಕರಡಿ ಮಜಲು, ಝಾಂಜ್, ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ಹಲವಾರು ಕಲಾ ತಂಡಗಳು, ಸಂಗೀತದ ಅಬ್ಬರ, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.


ಸಾಲಂಕೃತ ತೆರೆದ ವಾಹನದಲ್ಲಿ ಸಚಿವ ಎಂ.ಬಿ. ಪಾಟೀಲ ಅಭಿಮಾನಿ, ಹಿತೈಷಿಗಳಿಗೆ ಆತ್ಮೀಯತೆಯಿಂದ ಕೈ ಮುಗಿದು ಧನ್ಯವಾದ ಸಮರ್ಪಿಸಿದರು. ದಾರಿಯುದ್ದಕ್ಕೂ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಪ್ರದರ್ಶಿಸುತ್ತಾ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಕೆಲವು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರೆ, ಇನ್ನೂ ಕೆಲವರು ಪಟಾಕಿ ಸಿಡಿಸಿ ಸಂಭ್ರಮದಲ್ಲಿ ಮಿಂದೆದ್ದರು. ಇನ್ನೂ ಅಭಿಮಾನಿಗಳು ಜೆಸಿಬಿ ಮೂಲಕ ಬೃಹತ್ ಗಾತ್ರದ ಹಾರವನ್ನು ಪಾಟೀಲರಿಗೆ ಸಮರ್ಪಿಸಿದರು..
ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತಲುಪಿತು‌.


ಇದಕ್ಕೂ ಮುನ್ನ ನಗರದ ತೋಂಟದಾರ್ಯ ಶಾಖಾ ಮಠ,
ಹಾಗೂ ಯಡಿಯೂರು ತೋಂಟದಾರ್ಯ ಮಠದ ವಿಜಯಪುರ ಶಾಖಾ ಮಠ ಗದಗ ತೋಂಟದಾರ್ಯ‌ ಮಠದ ಜಗದ್ಗುರು ಡಾ ಸಿದ್ದರಾಮ‌ ಮಹಾಸ್ವಾಮಿ, ಹಾಗೂ ಅಭಿನವ ಸಿದ್ದಾರೂಢ ಸ್ವಾಮೀಜಿಗಳ ದರ್ಶಾನಾಶೀರ್ವಾದ ಪಡೆದುಕೊಂಡರು.
ಮಠದ ಆವರಣದಲ್ಲಿ ಸಸಿ ನೆಟ್ಟರು.

Latest Indian news

Popular Stories