ನಿಸರ್ಗದ ಮಡಿಲಲ್ಲಿ ಒಂದು ದಿನ ವಿಶೇಷ ಕಾರ್ಯಕ್ರಮ

ವಿಜಯಪುರ: ವಿಜಯಪುರ ತಾಲ್ಲೂಕಿನ ಅರಕೇರಿಯಲ್ಲಿರುವ ಆಪ್ಟೆ ಫೌಂಡೇಶನ್ ನ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ‘ನಿಸರ್ಗದ ಮಡಿಲಲ್ಲಿ ಒಂದು ದಿನ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಹಾಗೂ ಇದೇ ಸಂದರ್ಭದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ನಡೆಯಿತು.


ಈ ಸಂದರ್ಭದಲ್ಲಿ ಮಧುಮೇಹ ತಜ್ಞ, ಸಮಾಜ ಸೇವಕ ಡಾ. ಬಾಬುರಾಜೇಂದ್ರ ನಾಯಿಕ ಮಾತನಾಡಿ, ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜವಹಿಸುವುದು ಅನಿವಾರ್ಯವಾಗಿದ್ದು, ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇದ್ದ ಸಂಬಂಧಗಳು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ಆಷ್ಟೆ ಫೌಂಡೇಶನ್ ಮುಖ್ಯಸ್ಥ ಪತ್ರಕರ್ತರುವಿನಯ ಆಷ್ಟೆ, ರಾಮಸಿಂಗ ರಜಪುತ, ರಾಹುಲ್ ಆಷ್ಟೆ, ರೋಹಿತ ಆಷ್ಟೆ ದೇಶ ರಕ್ಷಕ ಪಡೆಯ ಸಂಸ್ಥಾಪಕ ರೋಹನ ಆಷ್ಟೆ, ಈಶ್ವರ ತೋಷ್ಟಿವಾಲ, ಅನಿಲ ಚವಾಣ, ನಂದಾ ಛತ್ರೆ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories