ವಿಜಯಪುರ ಪಾಲಿಕೆ ಬಜೆಟ್: ಕಾಂಗ್ರೆಸ್ ನಿಂದ ಬೋಗಸ್ ಬಜೆಟ್ ಮಂಡನೆ: ಲೋಣಿ

ವಿಜಯಪುರ : ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬೋಗಸ್ ಬಜೆಟ್ ಮಂಡಿಸಿ ನಗರದ ಮತದಾರರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಪಾಲಿಕೆ ಸದಸ್ಯ ರವೀಂದ್ರ ಲೋಣಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಬಜೆಟ್ ಇರಲಿ, ಪ್ರತಿ ವರ್ಷ ಬಜೆಟ್ನ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ವಿಜಯಪುರ ಮಹಾನಗರ ಪಾಲಿಕೆ ಇದಕ್ಕೆ ವ್ಯತೀರಿಕ್ತವಾಗಿ ಕಳೆದ ವರ್ಷಕ್ಕಿಂತ ಕಡಿಮೆ ಮೊತ್ತದ ಬಜೆಟ್ ಮಂಡಿಸಲಾಗಿದೆ. ಪ್ರತಿ ವರ್ಷ ಆದಾಯ ಹಾಗೂ ವೆಚ್ಚ ಎರಡೂ ಹೆಚ್ಚಾಗಿರುತ್ತದೆ. ಆದರೆ ಈ ಮಂಡನೆಯಾಗಿರುವ ಬಜೆಟ್ ಯಾವ ಲೆಕ್ಕದಲ್ಲಿ ಮಂಡಿಸಲಾಗಿದೆ ಎನ್ನವುದು ಅರ್ಥವಾಗುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಪಾಲಿಕೆಯಲ್ಲಿ ಚುನಾಯಿತ ಸದಸ್ಯರಿರಲಿಲ್ಲ. ಆಗ ಅಧಿಕಾರಿಗಳೇ 204 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಅದರಲ್ಲಿ ಸುಮಾರು 100 ಕೋಟಿ ರೂ. ನಷ್ಟು ಸರ್ಕಾರದ ಅನುದಾನ ತೋರಿಸಲಾಗಿತ್ತು. ಆದರೆ 2024-25 ನೇ ಸಾಲಿನ ಬಜೆಟ್ ಗಾತ್ರ 159 ಕೋಟಿ ರೂ. ಗೆ ಇಳಿಕೆ ಕಂಡಿದ್ದು, ಇದರಲ್ಲಿ ಸರ್ಕಾರದ ಅನುದಾನದ ಲೆಕ್ಕವನ್ನೇ ತೋರಿಸಿಲ್ಲ. ಈ ಬಜೆಟ್ ಅಂಕಿ-ಅಂಶಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿವೆ ಎಂದು ಬಜೆಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳು (ಕಟ್ಟಡ) ಹೆಚ್ಚಾಗುತ್ತಿವೆ. ಜನಸಂಖ್ಯೆ ಏರುಗತಿಯಲ್ಲಿದ್ದರೂ ಬಜೆಟ್ ಗಾತ್ರ ಕುಗ್ಗಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಾಗಾಗಿ ಇದೊಂದು ಅಪೂರ್ಣ ಹಾಗೂ ಅಂಕಿ-ಸಂಖ್ಯೆಗಳ ಸುಳ್ಳು ಮಾಹಿತಿ ಒಳಗೊಂಡ ಬಜೆಟ್ ಆಗಿದ್ದು, ನೂತನ ಮಹಾಪೌರರಾದ ಸಹೋದರಿ ಮೆಹೇಜ್ಬಿನ್ ಹೋರ್ತಿ ಅವರನ್ನು ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

31 ಕೋಟಿ ರೂ. ಆಸ್ತಿ ತೆರಿಗೆಯನ್ನು ಸಂಗ್ರಹಿಸುವುದಾಗಿ ಹೇಳಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 80 ಸಾವಿರ ಗುರುತಿಸಲ್ಪಟ್ಟ ಆಸ್ತಿಗಳಿವೆ. ಸುಮಾರು 15 ಸಾವಿರದಷ್ಟು ಗುಂಟಾ ಆಸ್ತಿಗಳಿವೆ. ಇತರೆ 10 ಸಾವಿರ ಹೀಗೆ ಒಟ್ಟು 90 ಸಾವಿರ ಆಸ್ತಿಗಳಿದ್ದರೂ ಇಲ್ಲಿಯವರೆಗೂ 40 ಸಾವಿರ ಆಸ್ತಿಗಳ ತೆರಿಗೆ ಸಂಗ್ರಹಿಸಲು ಹೆಣಗಾಡುವ ಪರಸ್ಥಿತಿ ಇದೆ. ಎಷ್ಟೇ ಸರ್ಕಸ್ ಮಾಡಿದರೂ 19 ರಿಂದ 20 ಕೋಟಿ ತೆರಿಗೆ ಸಂಗ್ರಹಿಸಬಹುದು. ಮಹಾಪೌರರು ಅಧಿಕಾರಿಗಳು ಸಿದ್ದಪಡಿಸಿರುವ ಹೊಂದಾಣಿಕೆಯಾಗದ ಸುಳ್ಳು ಅಂಕಿ-ಅಂಶಗಳನ್ನೇ ಓದುವ ಮೂಲಕ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈಗಿರುವ ಇಂದಿರಾ ಕ್ಯಾಂಟಿನ್ ನ ಟೆಂಡರ್ದಾರರಿಗೆ ಬಾಕಿ ಹಣ ಪಾವತಿಸಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೇರಡು ಹೊಸ ಇಂದಿರಾ ಕ್ಯಾಂಟಿನ್ ಘೋಷಣೆ ಮಾಡಿರುವುದು ದೊಡ್ಡ ಜೋಕ್ ಎಂದೇ ಹೇಳಬಹುದು. ಅಲ್ಲದೇ ಪೌರಕಾರರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುದಾನ ಹಂಚಿಕೆ ಮಾಡಿದ್ದಾರೆ. ಆದರೆ ಆ ಕಾರ್ಮಿಕರಿಗೆ ಕಳೆದ ನಾಲ್ಕೈದು ತಿಂಗಳ ವೇತನವನ್ನೇ ನಿಡಿಲ್ಲ ಎನ್ನುವುದು ಇಡೀ ವಿಜಯಪರ ನಗರಕ್ಕೆ ಗೊತ್ತಿದೆ. ಹಾಗಾಗಿ ಇದೊಂದು ಜನರ ದಾರಿ ತಪ್ಪಿಸುವ ಸುಳ್ಳು ಬಜೆಟ್ ಆಗಿದೆ ಎಂದರು.
ನಾವು ಎಲ್ಲವನ್ನು ಪರಿಶೀಲನ ಮಾಡುತ್ತಿದ್ದೇವೆ. ಮಹಾಪೌರರ ಬೆಂಬಲಿಗರು, ಆಪ್ತರು, ಇತರೇ ಪಾಲಿಕೆ ಸದಸ್ಯರ ಸಂಬಂಧಿಕರು ಯಾರೇ ಆಗಲಿ, ಸರ್ಕಾರಿ ಜಾಗಗಗಳ ಅತೀಕ್ರಮಣಕ್ಕೆ ಅನುಕೂಲ ಮಾಡಿಕೊಂಡಲ್ಲಿ ಹಾಗೂ ಯಾವುದೇ ರೀತಿಯ ಕಳ್ಳಾಟ ನಡೆಸಿದರೂ ನಾವು ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

ವಿಜಯಪರ ನಗರಕ್ಕೆ 24*7 ಕುಡಿಯುವ ನೀರು ಪೂರೈಕೆ ಮಾಡಲು ಲಿಂಗದಳ್ಳಿ ಜಾಕ್ವೆಲ್ನಿಂದ ಭೂತನಾಳ ಕೆರೆಗೆ ಪೈಪ್ಲೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಆ ಪೈಪ್ ಲೈನ್ಗೆ ಮಾರ್ಗ ಮಧ್ಯ ಹಾಳು ಮಾಡಿ ಅಕ್ರಮವಾಗಿ ನೀರು ಪಡೆದುಕೊಂಡು ಹೊಲಗಳಿಗೆ ಹಾಗೂ ಹಳ್ಳಗಳಿಗೆ ಹರಿಸಲಾಗುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ದಿವ್ಯ ನಿರ್ಲಕ್ಷ ವಹಿಸಿದ್ದರಿಂದಲೇ ಈಗ ವಿಜಯಪುರ ನಗರದ ಸುಮಾರು 7 ಕ್ಕೂ ಹೆಚ್ಚು ವಾರ್ಡನ ಜನರು ನೀರಿನ ಬರ ಎದುರಿಸುವ ಪರಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಕಾರಣದಿಂದ ವಿಜಯಪುರದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಳ್ಳಬೇಕು ಎಂದರು.

Latest Indian news

Popular Stories