ಪಂಜಾಬ್: ಅರೆಸೇನಾ ಪಡೆ ಯೋಧರಿಂದ ಆರು ಮಂದಿ ಅಪಹರಣ: ರೈತ ಮುಖಂಡರ ಆರೋಪ

ನವದೆಹಲಿ: ಖಾನೌರಿ ಗಡಿಯಲ್ಲಿ ಹಿಂಸಾತ್ಮಕ ಘರ್ಷಣೆ ನಡೆದ ನಂತರ ರೈತ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಅರೆಸೇನಾ ಪಡೆ ಮತ್ತು ಹರ್ಯಾಣ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಶಂಭುಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಮುಖಂಡರು, ಭದ್ರತಾ ಪಡೆಯ ಯೋಧರು ಗಡಿದಾಟಿ ಬಂದು ನಮ್ಮ ಟೆಂಟ್‌ ಗಳ ಮೇಲೆ ದಾಳಿ ನಡೆಸಿ, ಆರು ಮಂದಿಯನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಿದ್ದಾರೆ.
ಅರೆಸೇನಾಪಡೆ ಯೋಧರು ಗಡಿದಾಟಿ ಬಂದು ಟೆಂಟ್‌ ಗಳ ಮೇಲೆ ದಾಳಿ ನಡೆಸಿ, ಆರು ಮಂದಿಯನ್ನು ಅಪಹರಿಸಿಕೊಂಡು ಹೋಗಿರುವ ಘಟನೆಯನ್ನು ಖಂಡಿಸುವುದಾಗಿ ರೈತ ಮುಖಂಡರು ತಿಳಿಸಿದ್ದು, ಪಂಜಾಬ್‌ ಸರ್ಕಾರ ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಅರೆಸೇನಾ ಪಡೆ ದಾಳಿ ನಡೆಸಿದ ನಂತರ ಟೆಂಟ್‌ ಗಳಲ್ಲಿ ಇದ್ದ ಆರು ಮಂದಿ ನಾಪತ್ತೆಯಾಗಿದ್ದಾರೆ. ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರು ದೆಹಲಿಯತ್ತ ಮುನ್ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಹರ್ಯಾಣ ಮತ್ತು ಪಂಜಾಬ್‌ ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ರೈತರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿತ್ತು. ಹಿಂಸಾತ್ಮಕ ಘರ್ಷಣೆ ನಂತರ ರೈತ ಸಂಘಟನೆಗಳು ದಿಲ್ಲಿ ಚಲೋ ಪ್ರತಿಭಟನೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದವು.

Latest Indian news

Popular Stories