ವಿಜಯಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಭದ್ರಕೋಟೆ ಬೇಧಿಸುತ್ತಾ ಕಾಂಗ್ರೆಸ್

ಸಮಿ, ವಿಜಯಪುರ
ವಿಜಯಪುರ: ವಿಜಯಪುರ ಲೋಕಸಭಾ ಅಖಾಡ ರಂಗೇರಿದೆ. ಬಿಜೆಪಿ ಭದ್ರಕೋಟೆಯಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರ ಕೈ ವಶಕ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರ ಎಂದು ಕರೆಯಿಸಿಕೊಳ್ಳುವ ಹಿರಿಯ ಸಂಸದ ರಮೇಶ ಜಿಗಜಿಣಗಿಗೆ ಇದು ಕೊನೆಯ ಚುನಾವಣೆ ಆಗಿದ್ದು ಈ ಬಾರಿ ಶತಾಯಗತಾಯವಾಗಿ ಗೆಲ್ಲಲೆಬೇಕೆಂದು ಜಿಗಜಿಣಗಿ ಪಣತೊಟ್ಟಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರದ ಈ ಬಾರಿಯ ಚುನಾವಣೆ ತುಂಬಾನೆ ಸ್ಪೇಶಲ್ ಆಗಿದೆ. ಒಂದು ಕಡೆಗೆ ಹಾಲಿ ಸಂಸದರಿಗೆ ಇದು ಕೊನೆಯ ಚುನಾವಣೆ, ಮತ್ತೊಂದೆಡೆ ಬಿಜೆಪಿ ಭದ್ರಕೋಟೆ ಬೇದಿಸಲು ಕಾಂಗ್ರೆಸ್ ಪಕ್ಷ ರಣತಂತ್ರ ನಡೆಸಿದೆ. ಇಷ್ಟೆಲ್ಲದರ ನಡುವೆ ಈ ಬಾರಿ ಹಿರಿಯ ಸಂಸದ ರಮೇಶ್ ಜಿಗಜಿಣಗಿಗೆ ಬಿಜೆಪಿ ಟಿಕೇಟ್ ಸಿಗುತ್ತಾ ಎನ್ನುವ ಗೊಂದಲಕ್ಕೆ. ಬಿಜೆಪಿ ಹೈಕಮಾಂಡ್ ತೆರೆ ಎಳದಿದೆ ಹೀಗಾಗಿ ಈ ಬಾರಿಯ ಲೋಕಸಭಾ ಎಲೆಕ್ಷನ್ ಸಖತ್ ಸ್ಪೇಶಲ್ ಆಗಿದೆ. 2009ರಿಂದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರೀಕ್ ಮಾಡಿರುವ ಸಂಸದ ರಮೇಶ ಜಿಗಜಿಣಗಿ, ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಸಿದ್ದರಾಗಿದ್ದಾರೆ.
ಇನ್ನೂ ಬಿಜೆಪಿ ಭದ್ರಕೋಟೆಯಾಗಿರುವ ವಿಜಯಪುರ ಲೋಕಸಭಾ ಕ್ಷೇತ್ರವನ್ನ ಬೇದಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಮೋದಿ ಅಲೆ, ಜಿಗಜಿಣಗಿ ವರ್ಚಸ್ಸು, ಬಿಜೆಪಿ ಮತ ಬ್ಯಾಂಕ್ ಸತತ ಮೂರು ಬಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲು ಆಗುವ ಹಾಗೆ ಮಾಡಿತ್ತು. ಆದರೆ ಈ ಬಾರಿ ಬಿಜೆಪಿಯ ಜೊತೆಗೆ ಜೆಡಿಎಸ್ ಸಹ ಮೈತ್ರಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಅಲರ್ಟ್ ಆಗಿದೆ. ಈ ಬಾರಿ ಶತಾಯಗತಾಯವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕೈ ಮೇಲುಗೈ ಮಾಡಲು ರಣತಂತ್ರಹೆಣೆಯುತ್ತಿದ್ದು ಮಾಜಿ ಶಾಸಕ, ಕೈ ಜಿಲ್ಲಾಧ್ಯಕ್ಷ ರಾಜು ಅಲಗೂರ ಗೆ ಟಿಕೆಟ್ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿ ರಾಜು ಅಲಗೂರ ಗೆಲ್ಲಿಸಬೇಕೆಂದು ಕಾಂಗ್ರೆಸ್ ನಾಯಕರು ರಣತಂತ್ರ ಕೂಡ ಜೋರಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಗೆಲ್ಲುವ ಭರವಸೆಯನ್ನ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ.

ಈ ಬಾರಿಯ ರಾಜಕೀಯ ಚಿತ್ರಣ ಕೊಂಚ ಡಿಪ್ರೆಂಟ್ ಆಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬಾರಿ ಹಿನ್ನಡೆ ಅನುಭವಿಸಿದೆ. 8 ಕ್ಷೇತ್ರಗಳಲ್ಲಿ 6 ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಒಂದು ಬಿಜೆಪಿ, ಇನ್ನೊಂದು ಜೆಡಿಎಸ್ ಪಾಲಾಗಿದೆ. ಬಿಜೆಪಿಯಿಂದ ಗೆದ್ದಿರೋ ಶಾಸಕ ಯತ್ನಾಳ್ ಸಹ ಜಿಗಜಿಣಗಿ ವಿರೋಧಿ ಬಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ 6 ಶಾಸಕರನ್ನ ಹೊಂದಿದ್ದು, ಮತಬೇಟೆಗೆ ಅನುಕೂಲಕರ ವಾತಾವರಣ ಇದೆ. ಇದನ್ನ ಕಾಂಗ್ರೆಸ್ ಯಾವ ರೀತಿ ಬಳಸಿಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

Latest Indian news

Popular Stories