ವಿಜಯಪುರ: ಕೇಸರಿ ಗ್ಯಾರಂಟಿ ಕಾರ್ಡ್ ಬಿಡುಗಡೆ

ವಿಜಯಪುರ : ವಿಜಯಪುರ ಜಿಲ್ಲೆಯ ಸರ್ವತೋಮುಖ ಪ್ರಗತಿಗಾಗಿ 24 ಕಾರ್ಯಕ್ರಮಗಳ ಅಂಶಗಳುಳ್ಳ `ಕೇಸರಿ ಗ್ಯಾರಂಟಿ ಕಾರ್ಡ್’ ವಿತರಣೆಗೆ ಯುವ ಮುಖಂಡ ನಾಗೇಶ ಭೋವಿ ಮುಂದಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಕುರಿತು ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಆಕಾಂಕ್ಷೆ ಹೊಂದಿರುವ ನಾನು ಈ ನಿಟ್ಟಿನಲ್ಲಿ ಹೊಸ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇನೆ. `ಯೂತ್ ವಿಜನ್ ವಿಜಯಪುರ-2024′ ಈ ಮೂಲಕ ಪರಿವರ್ತನೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ನಾನು ಒಬ್ಬ ಸಾಮಾನ್ಯ ಸ್ವಯಂ ಸೇವಕನಾಗಿ ಕಳೆದ ಒಂದೂವರೆ ದಶಕಗಳಿಂದಲೂ ನೂರಾರು ಸಾಮಾಜಿಕ ಸೇವಾ ಚಟುವಟಿಕೆಗಳು ಸಮಾಜಿ ಸೇವಾ ಕಾರ್ಯಗಳು, ಸಂಘಟಣೆ, ಹೋರಾಟಗಳು, ಪ್ರತಿಭಟನೆಗಳನ್ನು ಮಾಡುತ್ತಾ ಸಂಘ ಪರಿವಾರದ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಭಾರತ ಮಾತೆಯ ಸೇವೆ ಮತ್ತು ಹಿಂದೂ ಸಮಾಜದ ಯುವ ಶಕ್ತಿಯನ್ನು ಮತ್ತು ಸಮಾಜವನ್ನು ಜಾಗೃತಿ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇನೆ ಎಂದರು.
ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಯುವ ಸಮುದಾಯನ್ನು ಹೊಂದಿದ ದೇಶ ಭಾರತ ಎಂದು ಹೇಳಲು ಹೆಮ್ಮೆ ಇದೆ.

ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ನಾಯಕತ್ವದಲ್ಲಿ ನಮ್ಮ ದೇಶವು ಸಮಗ್ರ ಅಭಿವೃದ್ಧಿ ಹೊಂದಿದೆ, ಹೀಗಾಗಿ ಅವರ ಆದರ್ಶದಲ್ಲಿ ವಿಜಯಪುರವನ್ನು ಪ್ರಗತಿ ಪಥದತ್ತ ಮುನ್ನಡೆಸುವ ಗುರಿ ಹೊಂದಿದ್ದು, ವಿಜಯಪುರ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪ್ರವಾಸೋದ್ಯಮ, ಕೈಗಾರಿಕೆ ಸೇವಾ ವಲಯ ಈ ರೀತಿ ಹತ್ತು ಹಲವು ಕ್ಷೇತ್ರಗಳಲ್ಲಿ ಪರಿವರ್ತನೆಯನ್ನು ತರಲು ಪ್ರಗತಿಯ ಪರ್ವಕಾಲ ಪಾರಂಭಿಸಬೇಕಿದೆ.

ಹಿರಿಯರ ಮಾರ್ಗದರ್ಶನದಲ್ಲಿ ಯುವ ಶಕ್ತಿಯೊಂದಿಗೆ ಶ್ರಮವಯಿಸಿ ವಿಜಯಪುರ ಜಿಲ್ಲೆಯನ್ನು ಲಭ್ಯವಿರುವ ಎಲ್ಲಾ ಸಂಪನ್ಮೂಲವನ್ನು ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸಮೃದ್ಧ ಸದೃಡ ಸಮಗ್ರ ಅಭಿವೃದ್ಧಿಶೀಲ ಜಿಲ್ಲೆಯಾಗಿ ರೂಪಿಸುವ ದೃಷ್ಟಿಯಿಂದ 24 ಯೋಜನೆಗಳನ್ನು ರೂಪಿಸಿದ್ದೇನೆ ಎಂದರು.

ಪ್ರಸ್ತುತ ವಿಜಯಪುರ ಜಿಲ್ಲೆಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿದ್ದೇನೆ, ಇಂದಿನ ರಾಜಕೀಯಕ್ಕೆ ಯುವಕರು, ಸಮಾಜಸೇವಕರು, ಸಂಘಟಕರು, ಹೋರಾಟಗಾರರು, ಹಿಂದುತ್ವ-ಗೋರಕ್ಷಕರು, ಕ್ರಿಯಾಶೀಲ ಮತ್ತು ಅಭಿವೃದ್ಧಿ, ಸೇವೆಯ ಬಗ್ಗೆ ವಿಬಿನ್ನ ವಿಚಾರದಾರೆಯನ್ನು ಹೊಂದಿದ ನಿಮ್ಮಂತ ಒಬ್ಬ ಸಾಮಾನ್ಯ ಕಾರ್ಯಕರ್ತ ಬರಬೇಕು ಎಂದು ಜನರು ಹಾಗೂ ಕಾರ್ಯಕರ್ತರು ಅಭಿಪ್ರಾಯ ಪಡುತ್ತಿದ್ದಾರೆ.

ಅವರ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹ, ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ನಾನು ರಾಜಿಕೀಯ ಕ್ಷೇತ್ರದಲ್ಲಿ ಪ್ರವೇಶ ಮಾಡಿ ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಯಸಿದ್ದೇನೆ ಎಂದರು.

Latest Indian news

Popular Stories