
State News
ರಾಜ್ಯದಲ್ಲಿ H3 N2 ವೈರಸ್ ಗೆ ಮೊದಲ ಬಲಿ
ಬೆಂಗಳೂರು:ಕೊರೊನಾ ಬಳಿಕ H3 N2 ವೈರಸ್ ರಾಜ್ಯದಲ್ಲಿ ಭೀತಿ ಸೃಷ್ಟಿಸಿದೆ.ಕರ್ನಾಟಕದಲ್ಲಿ ಹೆಚ್3ಎನ್2 ವೈರಸ್ಗೆ ಮೊದಲ ಬಲಿಯಾಗಿದೆ.
H3N2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಖಚಿತಪಡಿಸಿದ ಬಗ್ಗೆ tv9 ವರದಿ ಮಾಡಿದೆ.
ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ.ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H3N2 ಸೋಂಕು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.




