State News

ರಾಜ್ಯದಲ್ಲಿ H3 N2 ವೈರಸ್ ಗೆ ಮೊದಲ ಬಲಿ

ಬೆಂಗಳೂರು:ಕೊರೊನಾ ಬಳಿಕ H3 N2 ವೈರಸ್ ರಾಜ್ಯದಲ್ಲಿ ಭೀತಿ ಸೃಷ್ಟಿಸಿದೆ.ಕರ್ನಾಟಕದಲ್ಲಿ ಹೆಚ್​​3ಎನ್​​2 ವೈರಸ್​ಗೆ​​ ಮೊದಲ ಬಲಿಯಾಗಿದೆ.

H​​3N​​2 ವೈರಸ್​ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಖಚಿತಪಡಿಸಿದ ಬಗ್ಗೆ tv9 ವರದಿ ಮಾಡಿದೆ.

ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ.ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H​​3N​​2 ಸೋಂಕು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button