
Bidar
ಬೀದರ್ | ‘ಮಿಚಾಂಗ್’ ಚಂಡ ಮಾರುತ ಎಫೆಕ್ಟ್ ಜಿಲ್ಲೆಯಲ್ಲಿ ಹೆಚ್ಚಿದ ಥಂಡಿ
ಬೀದರ್: ‘ಮಿಚಾಂಗ್’ ಚಂಡಮಾರುತದ ಪ್ರಭಾವ ಜಿಲ್ಲೆಯ ಮೇಲೂ ಕೂಡ ಆಗಿದೆ. ಇದರ ಪರಿಣಾಮ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಆಗಾಗ ತುಂತುರು ಮಳೆ ಕೂಡ ಆಗುತ್ತಿದೆ.
ಚಂಡಮಾರುತದಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಬೆಳಿಗ್ಗೆ ಹತ್ತು ಗಂಟೆಯ ವರೆಗೆ ಮಂಜು ಆವರಿಸಿಕೊಂಡಿತ್ತು. ಸತತ ಮೂರನೇ ದಿನವೂ ಸೂರ್ಯನ ದರ್ಶನ ಆಗಲಿಲ್ಲ. ದಟ್ಟ ಮೋಡಗಳಿದ್ದ ಕಾರಣ ಮಂದ ಬೆಳಕಿತ್ತು. ಥಂಡಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆಯೂ ತಗ್ಗಿದೆ.
ಶಾಲಾ, ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರು ಛತ್ರಿ, ರೇನ್ಕೋಟ್ ಹಾಗೂ ಸ್ವೆಟರ್ ಧರಿಸಿಕೊಂಡು ಹೆಜ್ಜೆ ಹಾಕಿರುವುದು ಕಂಡು ಬಂತು. ‘ಚಳಿಗಾಲದಲ್ಲಿ ‘ಮಿಚಾಂಗ್’ ಚಂಡಮಾರುತ ಬಂದದ್ದರಿಂದ ಸಹಜವಾಗಿಯೇ ಥಂಡಿ ಬಹಳ ಹೆಚ್ಚಾಗಿದೆ. ಇಂತಹ ವಾತಾವರಣದಲ್ಲಿ ಕಿವಿ ಹಾಗೂ ಎದೆಭಾಗವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು.
ಎಂದು ವೈದ್ಯರು ಸಲಹೆ ಮಾಡಿದ್ದಾರೆ.




