Crime

ಸ್ವಾಮೀಜಿ ಆಗುವುದಾಗಿ ಹೇಳುತ್ತಿದ್ದ ಯುವಕ ನಾಪತ್ತೆ

ಗಂಗೊಳ್ಳಿ, ಡಿ.11: ಸ್ವಾಮೀಜಿ ಆಗುವುದಾಗಿ ಹೇಳುತ್ತಿದ್ದ ಯುವಕನೋರ್ವ ಮನೆಯಿಂದ ನಾಪತ್ತೆಯಾಗಿರುವ ಘಟನೆ ಆನಗೋಡು ಎಂಬಲ್ಲಿ ಡಿ.7ರಂದು ನಡೆದಿದೆ.

ಆನಗೋಡು ನಿವಾಸಿ ಬಾಬು ಎಂಬವರ ಮಗ ಗುರುರಾಜ(25) ನಾಪತ್ತೆಯಾದ ಯುವಕ.

ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ ಈತ, ತಾನು ಸ್ವಾಮೀಜಿ ಆಗುತ್ತೇನೆ ಎಂದು ಹೇಳುತ್ತಿದ್ದನು. ಡಿ.7ರಂದು ಬೆಳಗ್ಗೆ ತ್ರಾಸಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಗುರುರಾಜ್ ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button