ಉ‌. ಕ |ಸಾತೊಡ್ಡಿ ಜಲಪಾತಕ್ಕೆ ಬಿದ್ದು ಪ್ರವಾಸಿಗನ ಮೃತ್ಯು

ಕಾರವಾರ: ಯಲ್ಲಾಪುರ ಸಮೀಪದ ಪ್ರಸಿದ್ಧ ಪ್ರವಾಸಿ ಯಾಣ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದಿದ್ದ. ಹುಬ್ಬಳ್ಳಿ ಪ್ರವಾಸಿಗ ನೀರಲ್ಲಿ ಬಿದ್ದು ಮೃತಪಟ್ಟ ಘಟನೆ ನಿನ್ನೆ ಸಂಜೆ ಘಟಿಸಿದೆ.

ಹುಬ್ಬಳ್ಳಿ ಮೌಲಾಲಿ ದರ್ಗಾ ಬಳಿ ನಿವಾಸಿ ಹನಸ್ (36) ಎಂಬಾತ ಸ್ನೇಹಿತರ ಜೊತೆ ಜಲಪಾತ ವೀಕ್ಷಣೆಗೆ ಬಂದಿದ್ದರು.

ಈ ವೇಳೆ ಜಲಪಾತ ವೀಕ್ಷಣೆಯ ಸಮಯ ಕಾಲು ಜಾರಿ ನೀರಿಗೆ ಬಿದ್ದಿದ್ದು, ಹಸನ್ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಧಾವಿಸಿ , ಶವ ಎತ್ತಲು ಕುಟುಂಬದವರಿಗೆ ನೆರವಾದರು. ಹನಸ್ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ಪ್ರವಾಸಕ್ಕೆ ಬಂದವರು ತಿಳಿಸಿದ್ದಾರೆ.

Latest Indian news

Popular Stories