ಅಕ್ರಮ ಮದ್ಯ ಮಾರಾಟ ಮಾಡಿದರೆ ಕಾನೂನು ಕ್ರಮ

ಬಳ್ಳಾರಿ,ಜೂ.3(ಕರ್ನಾಟಕ ವಾರ್ತೆ): ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಯನ್ನು ಬಂದ್ ಮಾಡಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ರೀತಿಯ ಮದ್ಯದ ವಹಿವಾಟು ಹಾಗೂ ಮದ್ಯದ ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ. ಅಕ್ರಮವಾಗಿ ಮದ್ಯ್ಯ ಮಾರಾಟ ಮಾಡುವುದು ಕಂಡು ಬಂದರೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಎಂದು ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಇಂತಹ ಪರಿಸ್ಥಿತಿಯ ಸಮಯದಲ್ಲಿ ಕಳ್ಳಭಟ್ಟಿ ದುರಂತಗಳು ಘಟಿಸಿರುವ ಬಗ್ಗೆ ನಿದರ್ಶನಗಳಿವೆ. ಕಾರಣ ಇಂತಹ ಘಟನೆಗಳನ್ನು ಮರಕಳಿಸಿದಂತೆ ಮುನ್ನೆಚ್ಚರಿಕೆಯಾಗಿ ಸೂಕ್ತ ಕ್ರಮಕೈಗೊಳ್ಳವುದು ಇಲಾಖೆ ಆದ್ಯ ಕರ್ತವ್ಯ ಆಗಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ನಕಲಿ ಮದ್ಯ/ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಸಾಗಾಣಿಕೆ, ಮಾರಾಟ ಇತ್ಯಾದಿ ಚಟುವಟಿಕೆಗಳ ಕಂಡು ಬಂದಲ್ಲಿ ಜಿಲ್ಲೆಯ ಅಬಕಾರಿ ನಿಯಂತ್ರಣಾ ಕೊಠಡಿಯ ಸಂ: 08392-275555 ಕ್ಕೆ ದೂರು ನೀಡುವಂತೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಸಂಬಂಧಿಸಿದ ತಾಲ್ಲೂಕಿನ ಅಬಕಾರಿ ನಿಯಂತ್ರಣಾ ಕೊಠಡಿಗಳಿಗೆ/ಅಬಕಾರಿ ಅಧಿಕಾರಿಗಳಿಗೆ ಮಾಹಿತಿ/ ದೂರು ನೀಡಬಹುದು.
ಅಬಕಾರಿ ನಿಯಂತ್ರಣಾ ಕೇಂದ್ರದ ವಿವರಗಳು:
ಬಳ್ಳಾರಿ ಅಬಕಾರಿ ಉಪ ಆಯುಕ್ತರ ಕಚೇರಿ ದೂ.ಸಂ:08392-277905, ಮೊ.ಸಂ:9449597152, ಬಳ್ಳಾರಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ 08392-273685, 9449597155/ 9449597156, ಹೊಸಪೇಟೆ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ 08394-221330, 9449597157/ 9449597158, ಬಳ್ಳಾರಿ ಜಿಲ್ಲಾ ವಿಚಕ್ಷಣದಳದ ಅಬಕಾರಿ ನಿರೀಕ್ಷಕರ ಕಚೇರಿ 9449597154, ಬಳ್ಳಾರಿ ವಲಯ ನಂ1 ರ ಅಬಕಾರಿ ನಿರೀಕ್ಷಕರ ಕಚೇರಿಯ 08392-276677,8496089180/ 9740165883/ 9448935227, ಬಳ್ಳಾರಿ ವಲಯ ನಂ2 ರ ಅಬಕಾರಿ ನಿರೀಕ್ಷಕರ ಕಚೇರಿ 08392-276904, 9980496288/ 9740165883/ 8277350541, ಸಂಡೂರ ವಲಯದ ಅಬಕಾರಿ ನಿರೀಕ್ಷಕರ ಕಚೇರಿ 8050823609/ 8095311105/9483611563, ಸಿರುಗುಪ್ಪ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08396-221999, 8073637842/ 9880868705/ 9902107903, ಹೊಸಪೇಟೆ ವಲಯ ನಂ1 ರ ಅಬಕಾರಿ ನಿರೀಕ್ಷಕರ ಕಚೇರಿ 08394-228818, 6361153511/ 9742958739/ 7892560612, ಹೊಸಪೇಟೆ ವಲಯ ನಂ2 ರ ಅಬಕಾರಿ ನಿರೀಕ್ಷಕರ ಕಚೇರಿ 08394-230368, 9844118575/ 9449681958/ 6361696915, ಹೆಚ್.ಬಿ.ಹಳ್ಳಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08397-239563, 9739736333/ 9483227218, ಹಡಗಲಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08399-240332, 9972775336/ 6360796363, ಕೂಡ್ಲಿಗಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08391-220330, 9980847456, ಹರಪನಹಳ್ಳಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ08398-282040, 9902194148/ 9731227255 ಗೆ ಸಂಪರ್ಕಿಸಬಹುದು.

Latest Indian news

Popular Stories