ವ್ಯಕ್ತಿ ಕಾಣೆ:ಪ್ರಕರಣ ದಾಖಲು

ಬಳ್ಳಾರಿ,ಜು.23(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ನಿವಾಸಿಯಾದ 63 ವರ್ಷದ ಎ.ನಾಗಪ್ಪ ತಂದೆ ಲೇಟ್ ಎ.ಸೂಗಪ್ಪ ಎಂಬ ವ್ಯಕ್ತಿ 2021ರ ಮಾ.09 ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: 5.6 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ, ತೆಲುಗು,ಹಿಂದಿ, ಮಾತಾನಾಡಲು ಬರುತ್ತದೆ. ಬಿಳಿ ಬಣ್ಣದ ಅಂಗಿ ಮತ್ತು ಆಕಾಶ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ನಂ:08392-258100 ಅಥವಾ ಗಾಂಧಿನಗರ ಪೊಲೀಸ್ ಠಾಣೆ ದೂ.ಸಂ: 08392-272192 ಮತ್ತು ಪಿ.ಎಸ್.ಐ ಗಾಂಧಿನಗರ ರವರ ಮೊ.ಸಂ:9480803082 ಹಾಗೂ ಪಿ.ಐ. ಗಾಂಧಿನಗರ ಮೊ.ಸಂ:9480803046ಕ್ಕೆ ಸಂಪರ್ಕಿಸಲು ಕೋರಲಾಗಿದೆ.

Latest Indian news

Popular Stories