ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಮದ್ಯದ ದರ ಮತ್ತೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಇದರ ಜೊತೆಗೆಯೇ ಮತ್ತೊಂದು ಖುಷಿಯ ವಿಚಾರದ ಸುಳಿವನ್ನು ಸಿದ್ದರಾಮಯ್ಯ ನೀಡಿದ್ದಾರೆ.
ದಕ್ಷಿಣದ ಇತರ ರಾಜ್ಯಗಳೊಂದಿಗೆ ಪೈಪೋಟಿ ನಡೆಸಲು, ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್, ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡಲಾಗುತ್ತದೆ. ಮದ್ಯದ ಬೆಲೆ ಏರಿಕೆ ಬೆನ್ನಲ್ಲೆ ರಾಜ್ಯ ಸರ್ಕಾರ ಅಬಕಾರಿ ಸ್ಲಾಬ್‌ಗಳ ಮೇಲೆ ಇದ್ದ ತೆರಿಗೆಯನ್ನು ಕಡಿಮೆ ಮಾಡಲಿದೆ.
ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ತೆರಿಗೆ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸಲು ಮತ್ತು ಅವುಗಳನ್ನು ನೆರೆಯ ರಾಜ್ಯಗಳೊಂದಿಗೆ ಪೈಪೋಟಿ ಮಾಡಲು, ಐಎಂಎಲ್ ಮತ್ತು ಬಿಯರ್‌ನ ತೆರಿಗೆ ಸ್ಲಾಬ್‌ಗಳನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದ್ದರು. ಎಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಸೈಬರ್ ಖದೀಮರ ಕೈಚಳಕರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಮೂರು ಬಾರಿ ಮದ್ಯದ ಬೆಲೆ ಏರಿಕೆಯಾಗಿದೆ.
ಬಜೆಟ್‌ನಲ್ಲಿ ಐಎಂಎಲ್ ಹಾಗೂ ಬಿಯರ್ ಮೇಲೆ 20% ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿತ್ತು. ನಂತರ ಐಎಂಎಲ್ ಮದ್ಯ, ಬಿಯರ್ ತಯಾರಿಕಾ ಕಂಪನಿಗಳು ದರ ಹೆಚ್ಚಳ ಮಾಡಿದ್ದವು. ಕಳೆದ ತಿಂಗಳು ಬಿಯರ್ ಮೇಲೆ ಮತ್ತೆ 5 %ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು
ಈಗ ಸ್ಲಾಬ್ ಪರಿಷ್ಕರಣೆಯಿಂದ ಬಿಯರ್ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಮದ್ಯಕ್ಕೆ ಸ್ಲಾಬ್ ಪ್ರಕಾರ ಬೆಲೆ ಮತ್ತು ತೆರಿಗೆ ವಿಧಿಸಲಾಗುತ್ತದೆ. ಒಟ್ಟು 18 ಸ್ಲಾಬ್‌ಗಳಿದ್ದು, ಮೊದಲನೆಯದರಲ್ಲಿ ಅಗ್ಗದ ಆಲೋಹಾಲ್ ಮತ್ತು 18 ರಲ್ಲಿ ಅತ್ಯಂತ ದುಬಾರಿ ಐಎಂಎಲ್ ಬರುತ್ತದೆ. ಕಳೆದ ಜುಲೈನಲ್ಲಿ ಐಎಂಎಲ್‌ನ ಎಲ್ಲಾ 18 ಸ್ಲಾಬ್‌ಗಳಲ್ಲಿ ಎಇಡಿಯಲ್ಲಿ ಶೇ. 20 ರಷ್ಟು ಹೆಚ್ಚಳ ಮಾಡಿತ್ತು.
ಬಿಯರ್ ಬೆಲೆಗಳಲ್ಲಿ ಶೇ. 10 ರಷ್ಟು ಹೆಚ್ಚಾಗಿತ್ತು.ಹೆಚ್ಚಿನ ತೆರಿಗೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಐಎಂಎಲ್‌ನ ಉನ್ನತ ಬ್ರಾಂಡ್‌ಗಳು ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ಬೆಲೆ ಹೊಂದಿವೆ. ಹೀಗಾಗಿಯೇ ಬೆಲೆ ಪೈಪೋಟಿ ಕಾರಣದಿಂದ ಸ್ಲಾಬ್ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.