ಹಳದಿ ಮಾರ್ಗ ಕಾರ್ಯಾಚರಣೆ ಪ್ರಕ್ರಿಯೆ ಆರಂಭಿಸಿದ BMRCL

ಬೆಂಗಳೂರು, ಫೆಬ್ರವರಿ 16: ಬೆಂಗಳೂರು ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಮುಗಿದು ಯಾವಾಗ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುತ್ತದೋ ಎಂದು ಕಾಯುತ್ತಿದ್ದಾರೆ. ಹೊಸದಾಗಿ ಬಂದ ಮಟ್ರೋ ಆರು ಕೋಚ್‌ಗಳನ್ನು ಅನ್‌ಲೋಡ್ ಮಾಡಿ ಜೋಡಿಸಲಾಗಿದೆ ಎಂದು BMRCL ಮಾಹಿತಿ ನೀಡಿದೆ.ಎರಡು ದಿನದ ಹಿಂದಷ್ಟೇ ಚೆನ್ನೈನಿಂದ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಚೀನಾ ಕಂಪನಿ ನಿರ್ಮಿತ ಮೆಟ್ರೋ ಪ್ರೋಟೊಟೈಪ್ ಬೋಗಿಗಳು ಆಗಮಿಸಿದ್ದವು.

ಇದೀಗ ಅವುಗಳನ್ನು ಲಾರಿಗಳಿಂದ ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ ಎಂದು ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ. ಹಳದಿ ಮಾರ್ಗದ ಕಾರ್ಯಾಚರಣೆ ಆರಂಭದ ಪ್ರಕ್ರಿಯೆಗಳು ಶುರುವಾಗುತ್ತಿವೆ. ಸದ್ಯ ರೈಲಿನ ಮೇಲೆ ಬೋಗಿಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಕುರಿತ ಫೋಟೊ ಮತ್ತು ವಿಡಿಯೋಗಳನ್ನು ನಮ್ಮ ಮೆಟ್ರೋ ಹಂಚಿಕೊಂಡಿದೆ.

ಚೀನಾ ಅಧಿಕಾರಿಗಳ ಶೀಘ್ರ ಆಗಮನಮೆಟ್ರೋ ಕೋಚ್‌ಗಳು ಬೆಂಗಳೂರಿಗೆ ಬರುತ್ತಿದ್ದಂತೆ ಪ್ರಾಯೋಗಿಕ ಸಂಚಾರಕ್ಕೆ ವಿವಿಧ ಅನುಮತಿಗಳನ್ನು BMRCL ಪಡೆಯಬೇಕಿದೆ. ಅದಾದ ಬಳಿಕವೇ ಟ್ರಯಲ್ ರನ್ ನಡೆಯಲಿದೆ. ಇವು ಚಾಲಕ ರಹಿತ ಮೆಟ್ರೋ ಕೋಚ್‌ಗಳಾಗಿದ್ದರಿಂದ ಇವುಗಳ ಕುರಿತು ತಿಳಿಸಲು, ಪ್ರಾಯೋಗಿಕ ಸಂಚಾರಕ್ಕೆ ಸಹಕಾರಿಯಾಗಲು ಬೋಗಿ ನಿರ್ಮಿತ ಚೀನಾ ಕಂಪನಿಯ ಅಧಿಕಾರಿಗಳು ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ.ಲಕ್ಷಾಂತರ ಜನರಿಗೆ ಅನುಕೂಲ: ಟ್ರಾಫಿಕ್ ಇಳಿಕೆಚೀನಾ ಅಧಿಕಾರಿಗಳ ಸಮ್ಮುಖದಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಪ್ರಾಯೋಗಿಕ ಸಂಚಾರ ನಡೆಸಲಿವೆ.

ಎಂದು ಹೇಳಲಾಗಿದೆ. ನಿಗದಿಯಂತೆ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರವರೆಗಿನ 19.2 ಕಿಲೋ ಮೀಟರ್ ಮೆಟ್ರೋ ಹಳದಿ ಮಾರ್ಗವು ಇದೇ ತಿಂಗಳ ಫೆಬ್ರವರಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದ ಮಟ್ರೋ ಕೋಚ್ ಪೂರೈಕೆ ವಿಳಂಬವಾಯಿತು. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಐಟಿ ಕಾರಿಡಾರ್‌ಗಳಲ್ಲಿ ಉಂಟಾಗುವ ಜನದಟ್ಟಣೆ ತಡೆಗೆ ಈ ಹಳದಿ ಮಾರ್ಗ ಪೂರಕವಾಗುವ ವಿಶ್ವಾಸ ವಿದೆ.

Latest Indian news

Popular Stories