ಬೆಂಗಳೂರು, ಫೆಬ್ರವರಿ 14: ಸರ್ಕಾರಿ ನೌಕರರ ರಜಾದಿನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೆಲವು ಹೊಸ ನಿಯಮಗಳನ್ನು ಮಾಡಿದೆ. ಎಷ್ಟು ದಿನ ರಜೆ ಹಾಕಿದರೆ ಉದ್ಯೋಗಿಗಳ ಉದ್ಯೋಗಕ್ಕೆ ಅಪಾಯ ಎದುರಾಗಬಹುದು ಎನುವುದರ ಬಗ್ಗೆ ನೌಕರರ ರಜೆಯ ಸ್ಥಿತಿಯನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆಹೌದು, ಸರ್ಕಾರಿ ನೌಕರರಿಗೆ ರಜೆಗೆ ಸಂಬಂಧಿಸಿದ ಹಲವು ಅನುಮಾನಗಳಿದ್ದು, ಈ ಅನುಮಾನ ಹಾಗೂ ಗೊಂದಲಗಳಿಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರರು ಸತತ ಎಷ್ಟು ದಿನ ರಜೆ ಪಡೆಯಬಹುದು, ಒಂದು ವೇಳೆ ಹೆಚ್ಚು ರಜೆ ತೆಗೆದುಕೊಂಡರೆ ಅದು ನೌಕರರ ಸೇವೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರವೂ ತಿಳಿಸಲಾಗಿದೆ. ಈ ಬಗ್ಗೆ FAQ ಹೊರಡಿಸಿರುವ ಸರ್ಕಾರ ವಿವಿಧ ವರ್ಗದ ಉದ್ಯೋಗಿಗಳ ಅರ್ಹತೆಗಳು, ಲೀವ್ ಟ್ರಾವೆಲ್ ಕನ್ಸೆಷನ್, ರಜೆ ಎನ್‌ಕ್ಯಾಶ್‌ಮೆಂಟ್, EL ಎನ್‌ಕ್ಯಾಶ್‌ಮೆಂಟ್, ಪಿತೃತ್ವ ರಜೆ ಮುಂತಾದ ವಿಷಯಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.ವಿದೇಶಿ ಸೇವಾ ಉದ್ಯೋಗಿFAQ ಪ್ರಕಾರ ವಿದೇಶಿ ಸೇವಾ ಉದ್ಯೋಗಿಯು ನಿರಂತರವಾಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ, ಆ ನೌಕರನ ಸೇವೆಯನ್ನು ಕೊನೆಗೊಳಿಸಲಾಗುತ್ತದೆ
ವಿದೇಶಿ ಸೇವೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರದ ಸರ್ಕಾರಿ ಉದ್ಯೋಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನೌಕರರು ನಿರಂತರವಾಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆ ತೆಗೆದುಕೊಳ್ಳಲು ಅನುಮತಿ ಇಲ್ಲ.
ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಯಾವ ಘೋಷಣೆ? ಇನ್ನೂ ಮಕ್ಕಳ ಆರೈಕೆ ರಜೆಯನ್ನು ಸಹ ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ. ಮಗು ವಿದೇಶದಲ್ಲಿ ಓದುತ್ತಿದ್ದರೆ ಅಥವಾ ಮಹಿಳಾ ಉದ್ಯೋಗಿ ಅವರನ್ನು ನೋಡಿಕೊಳ್ಳಲು ವಿದೇಶಕ್ಕೆ ಹೋಗಬೇಕಾದರೆ, ಕೆಲವು ಅಗತ್ಯ ಕಾರ್ಯವಿಧಾನಗಳ ನಂತರ ರಜೆಯನ್ನು ಅನುಮತಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಕೇಂದ್ರ ಆರೋಗ್ಯ ಸೇವೆಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಅಧ್ಯಯನ ರಜೆಗಾಗಿ 36 ತಿಂಗಳ ಸಮಯವನ್ನು ನೀಡಲಾಗುತ್ತದೆ.