ರಾಜ್ಯದಲ್ಲಿಂದು 173 ಜನರಿಗೆ ಕೊರೋನಾ ದೃಢ, ಸೋಂಕಿಗೆ ಇಬ್ಬರು ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ ಮತ್ತೆ ಏರಿಕೆಯಾಗಿದೆ. ಇಂದು ಹೊಸದಾಗಿ 173 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು ಕಳೆದ 24 ಗಂಟೆಯಲ್ಲಿ RTPCR ಮೂಲಕ 6400 ಮಂದಿಯನ್ನು, RAT ಮೂಲಕ 1949 ಸೇರಿದಂತೆ 8,349 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಇವರಲ್ಲಿ 173 ಮಂದಿಗೆ ಕೋವಿಡ್ ಪಾಸಿಟಿವ್ ಅಂತ ವರದಿಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ.ಅಂದಹಾಗೆ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ 82, ಬಳ್ಳಾರಿ 06, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಕಲಬುರ್ಗಿ, ಕೊಡಗು ಹಾಗೂ ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ವಿಜಯನಗರ 07, ಉತ್ತರ ಕನ್ನಡ 02, ಶಿವಮೊಗ್ಗ 04, ಮೈಸೂರು 16, ಮಂಡ್ಯ 06, ಕೋಲಾರ 02, ಹಾಸನ 09, ಗದಗ 04, ದಾವಣಗೆರೆ 02, ದಕ್ಷಿಣ ಕನ್ನಡ 13, ಚಿತ್ರದುರ್ಗ 04, ಚಿಕ್ಕಬಳ್ಳಾಪುರ 06, ಚಾಮರಾಜನಗರ 04 ಕೋವಿಡ್ ಕೇಸ್ ದೃಢಪಟ್ಟಿದೆ.

Latest Indian news

Popular Stories