Bidar

ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರು: ಗಿಗ್ ವಿಮಾ ಯೋಜನೆಯಡಿ ಹೆಸರು ನೋಂದಾಯಿಸಿ.

ಬೀದರ :ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಂಡು ಇದರ ಲಾಭ ಪಡೆಯಬೇಕು.

ಗಿಗ್ ಕಾರ್ಮಿಕ ಸಾಮಾಜಿಕ ಭದ್ರತಾ ಸಂಹಿತೆ 2020 ರ ಕಲಂ 2(35) ರನ್ವಯ ಕೆಲಸವನ್ನು ನಿರ್ವಹಿಸುವ ಅಥವಾ ಕೆಲಸದ ವ್ಯವಸ್ಥೆಯಲ್ಲಿ ಭಾಗವಹಿಸುವ ಮತ್ತು ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬAಧದ ಹೊರಗಿನ ಚಟುವಟಿಕೆಗಳಿಂದ ಆದಾಯ ಗಳಿಸುವ ವ್ಯಕ್ತಿ ಮತ್ತು ನಿರ್ಧಿಷ್ಟ ದರವನ್ನು ಪಾವತಿಸುವ ಒಪ್ಪಂದದ (ಎಲ್ಲಾ ತುಂಡು ದರದ ಕೆಲಸವನ್ನು ಒಳಗೊಂಡAತೆ) ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿ ಉದಾಹರಣೆಗೆ ಸ್ವಿಗ್ಗಿ, ಜ್ಹೊಮ್ಯಾಟೋ, ಅಮೇಜಾನ್, ಬಿಗ್ ಬಾಸ್ಕೆಟ್, ಪ್ಲಿಪ್ ಕಾರ್ಟ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆಯಡಿ ಲಾಭ ಪಡೆಯಬಹುದಾಗಿದೆ.

ಇಂತಹ ಫಲಾನುಭವಿಗಳು ಅಪಘಾತದಿಂದ ಉಂಟಾಗುವ ಮರಣ, ಸಂಪೂರ್ಣ ಶಾಶ್ವತ, ಭಾಗಶಃ ದುರ್ಬಲತೆಗೆ ಹಾಗೂ ತಾತ್ಕಾಲಿಕ ದುರ್ಬಲತೆಗೆ ಕಾನೂನು ಬದ್ಧ ವಾರಸುದಾರರಿಗೆ ಅಥವಾ ಫಲಾನುಭವಿಗೆ ವಿಮಾ ಮೊತ್ತ ದೊರೆಯುತ್ತದೆ.

ಈ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಎಲ್ಲಾ ಗಿಗ್ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆಯಲು ನೇರವಾಗಿ ಸೇವಾ ಸಿಂಧು ತಂತ್ರಾಶ/ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ತಾವುಗಳು ನೋಂದಣಿ ಮಾಡಲು ಸಹಾಯ ಬೇಕಾದಲ್ಲಿ ತಮ್ಮ ಕಾರ್ಯವ್ಯಾಪ್ತಿಯ ಕಾರ್ಮಿಕ ಇಲಾಖೆಗಳ ಕಛೇರಿಯನ್ನು ಸಹ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ಬೀದರ ಉಪವಿಭಾಗ, ಬೀದರ ಕಾರ್ಮಿಕ ನಿರೀಕ್ಷಕರು,ಬೀದರ್,ಔರಾದ,ಹುಮನಾಬಾದ.ಬಸವಕಲ್ಯಾಣ ಇವರ ಕಛೇರಿಗಳಿಗೆ ಸಂಪರ್ಕಿಸುವAತೆ ಬೀದರ ಉಪ ವಿಭಾಗದ ಕಾರ್ಮಿಕ ಅಧಿಕಾರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button