
ಪ್ರತಾಪ್ ವಿರುದ್ದ ಕಾಂಗ್ರೆಸ್ ನ ಅರ್ಥಹೀನ ಟೀಕೆ. – ಮಹೇಶ್ ಜೈನಿ ಆಕ್ರೋಶ
ಸಂಸದ ಪ್ರತಾಪ್ ಸಿಂಹ ಅವರನ್ನು ಎದುರಿಸಲಾಗದ ಕಾಂಗ್ರೆಸ್ ವಾಮ ಮಾರ್ಗದ ಮೂಲಕ ಪ್ರತಾಪ್ ಸಿಂಹ ಅವರ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತಿದೆ.
ಕರ್ನಾಟಕದ ಅತ್ಹ್ಯಂತ ಜನಪ್ರಿಯ ಸಂಸತ್ ಸದಸ್ಯ ಪ್ರತಾಪ್ ಸಿಂಹ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ . ಸಂಸತ್ ದಾಳಿಯನ್ನು ಇವರ ತಲೆಗೆ ಕಟ್ಟುವ ಹುಚ್ಚು ಸಾಹಸ ಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಕೊಡಗು ಬಿಜೆಪಿ ವಕ್ತಾರ ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ಕಛೇರಿ ಯಿಂದ ಪಾಸ್ ಕೊಟ್ಟಿದ್ದನ್ನೇ ನೆಪವಾಗಿ ಇಟ್ಟುಕೊಂಡ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಹರ ತೇಜೋವದೆ ಗೆ ಪ್ರಯತ್ನಿರುವುದು ನಾಚಿಕೆ ಗೇಡಿನ ಸಂಗತಿ ಎಂದಿರುವ ಜೈನಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಆವರ ಬಳಿ ಪತ್ತೆ ಯಾದ ಹಣ ದೇಶ ದಾಧ್ಯಾಂತ ಸುದ್ದಿ ಯಾದಾಗ ಕಾಂಗ್ರೆಸ್ ಎ ಟಿ ಎಂ ಮೇಷಿನ್ ಧೀರಜ್ ಸಾಹು ಅವರ ವಿಷಯ ವನ್ನು ದೇಶದ ಜನತೆ ಯಿಂದ ದೂರ ಸರಿಸಲು ಕಾಂಗ್ರೆಸ್ ಪ್ರತಾಪ್ ಸಿಂಹ ಅವರ ಮೇಲೆ ಅನವಶ್ಯ ಆರೋಪ ಮಾಡುತ್ತಿದೆ.
ಯಾವ ಸಂಸದ ಕೂಡ ತನ್ನ ಕ್ಷೇತ್ರದ ಜನತೆ ತನ್ನ ಬಳಿ ಬಂದು ಸಂಸತ್ ನ ಕಾರ್ಯ ಕಲಾಪ ವೀಕ್ಷಿಸಲು ಅವಕಾಶ ಮಾಡಿ ಕೊಡಿ ಎಂದಾಗ ಅದಕ್ಕೆ ಸ್ಪಂದಿಸುವುದು ಸಾಮಾನ್ಯ. ಆದರೆ ಅದನ್ನೆ ದುರ್ಬಳಕೆ ಮಾಡಿದ ದೇಶ ದ್ರೋಹಿ ಗಳು ಸಂಸತಿ ನಲ್ಲಿ ನಡೆದು ಕೊಂಡ ರೀತಿ ಯಾರಿಂದಲೋ ಪ್ರಚೋದನೆ ಗೆ ಒಳಗಾಗಿ ಮಾಡಿದ ಕೃತ್ಯ ವೆಂದು ಅರ್ಥ ಮಾಡಿ ಕೊಳ್ಳಲು ಈ ದೇಶದ ಜನತೆಗೆ ಬಹಳ ಸಮಯ ಹಿಡಿಯಲಿಲ್ಲ. ಸ್ವತ ಆರೋಪಿ ಯೊಬ್ಬನ ತಂದೆ ತಪ್ಪು ಮಾಡಿದ ಮಗನನ್ನು ಗಲ್ಲಿಗೇರಿಸಿ ಎಂದರು ಕೂಡ ಕಾಂಗ್ರೆಸ್ ದೇಶದ ಭದ್ರತೆ ವಿಷಯವನ್ನು ರಾಜಕೀಯ ಗೊಳಿಸಿ ಸಂಸದರ ರಾಜೀನಾಮೆ ಗೆ ಒತ್ತಾಯ ಮಾಡಿರುವುದು ಇವರ ಕೀಳು ರಾಜಕೀಯ ವನ್ನು ಎತ್ತಿ ತೋರಿಸುತಿದೆ ಎಂದು ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.
ಸಂಸತ್ ದಾಳಿಗೆ ನಿರುದ್ಯೋಗ ಬೆಲೆ ಏರಿಕೆ ಕಾರಣ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಇಂತಹ ಘಟನೆ ಗಳಿಗೆ ಪ್ರಚೋದನೆ ನೀಡುತಿದ್ದು ದೇಶದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟವಾಡುತಿದೆ ಎಂದು ಜೈನಿ ದೂರಿದ್ದಾರೆ.
ಪ್ರತಾಪ್ ಸಿಂಹ ಅವರನ್ನು ಗುರಿಯಾಗಿಟ್ಟು ಕೊಂಡು ಮಾತನಾಡುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಗಳಿಗೆ ಪ್ರಧಾನಿ ಮೋದಿ ಅವರ ಭಯ ಕನಸಿನಲ್ಲೂ ಕಾಡುತ್ತಿದ್ದು ಕಾಂಗ್ರೆಸ್ ಪ್ರೇರಿತ ಟೂಲ್ ಕಿಟ್ ನ ಭಾಗವಾಗಿ ಈ ದಾಳಿ ನಡೆದಿದೆ ಎಂದು ಜೈನಿ ವ್ಯಾಖ್ಯಾನಿಸಿದ್ದಾರೆ.
ಆದರೆ ಸಂಸದ ಪ್ರತಾಪ್ ಸಿಂಹ ಮೇಲೆ ಹಾಗೂ ಅವರು ಮಾಡುತಿರುವ ಅಭಿವೃದ್ಧಿ ಕೆಲಸದ ಬಗ್ಗೆ ಅವರು ಪ್ರತಿನಿದಿಸುತಿರುವ ಕೊಡಗು ಮೈಸೂರು ಕ್ಷೇತ್ರದ ಜನತೆಗೆ ಸಂಪೂರ್ಣ ವಿಶ್ವಾಸವಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ನ ಷಡ್ಯಂತ್ರ ಈ ರಾಜ್ಯ ದಲ್ಲಿ ನಡೆಯುದಿಲ್ಲ ಎಂದು ಮಹೇಶ್ ಜೈನಿ ಪ್ರತಿಕ್ರಿಯಿಸಿ ದ್ದಾರೆ




