ಸಿಎಂ ಜನಸ್ಪಂದನ’ಕ್ಕೆ ಭರ್ಜರಿ ರೆಸ್ಪಾನ್ಸ್: ಇದುವರೆಗೆ ‘11,601 ಅರ್ಜಿ’ ಸ್ವೀಕೃತ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ವಿಧಾನಸೌಧದ ಮುಂದೆ ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿದರು. ಈ ಕಾರ್ಯಮಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದಂತ ಜನರು 11,601 ಅರ್ಜಿಯನ್ನು 4 ಗಂಟೆಯವರೆಗೆ ಸಲ್ಲಿಸಿದ್ದಾರೆ.

ಇಂದಿನ ಎರಡನೇ ಬಾರಿಯ ಸಿಎಂ ಸಿದ್ಧರಾಮಯ್ಯ ಅವರ ಜನಸ್ಪಂದನ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ.ಅಲ್ಲದೇ ಅಪಘಾತಕ್ಕೆ ಒಳಗಾದ ಲೋಕೇಶ್ ಪುಟ್ಟನಾಯಕ ಅವರಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ 50 ಸಾವಿರ ರೂ.ಗಳ ಪರಿಹಾರವನ್ನು ಜನಸ್ಪಂದನದ ಸ್ಥಳದಲ್ಲಿಯೇ ಘೋಷಿಸಿ ಪರಿಹಾರ ಬಿಡುಗಡೆ ಪತ್ರ ನೀಡಿದ್ದಾರೆ.

ಇದಷ್ಟೇ ಅಲ್ಲದೇಕೋಲಾರ ಜಿಲ್ಲೆಯ ಕೆ.ಜಿ.ಎಫ್ ನ ಎಂಟು ವರ್ಷದ ಎನ್.ಕೃಷ್ಣ ಅವರಿಗೆ 1 ಲಕ್ಷ ರೂ. ಗಳ ಪರಿಹಾರ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸ್ಪಂದನದ ಸ್ಥಳದಲ್ಲಿಯೇ ಘೋಷಿದರು.

ಬೆಂಗಳೂರಿನ ನೂರ್ ಫಾತಿಮಾ ಬಿನ್ ಇಬ್ರಾಹಿಂ ಇವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಕಝಾಕಿಸ್ಥಾನದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ರೂ.ಗಳ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ತಂದೆಗೆ ಹಸ್ತಾಂತರ ಮಾಡಿದರು.

Latest Indian news

Popular Stories