ಬೆಂಗಳೂರು: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವವರು ಅಂಬಾನಿ, ಅದಾನಿಯ ಹಿತ ಕಾಯುತ್ತಿದ್ದಾರೆʼʼ . ಇದು ಸಂಸದರಾದ ಡಿ.ರಾಜಾ ಅವರ ಮಾತುಗಳು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಆರೆಸ್ಸೆಸ್ ಬಿಜೆಪಿ ಸರ್ಕಾರದ ಮೇಲೆ ನೇರ ನಿಯಂತ್ರಣ ಹೊಂದಿದೆ. ಥಿಯೋಕ್ರೆಟಿಕ್ ದೇಶ ಆಗಬೇಕು ಎಂಬ ಅಂಬೇಡ್ಕರ್ ಅವರ ಆಶಯವನ್ನು ಅವರು ಒಪ್ಪುವುದೇ ಇಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವವರು ಅಂಬಾನಿ, ಅದಾನಿಯ ಹಿತ ಕಾಯುತ್ತಿದ್ದಾರೆʼʼ. ರಾಜ್ಯ ಸರ್ಕಾರದ ಐತಿಹಾಸಿಕ ” ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ”ದಲ್ಲಿ ಸಂಸದರಾದ ಡಿ.ರಾಜಾ ಅವರ ಮಾತುಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.