ರಾಯಚೂರು: ‘ಪಿಎಸ್ಐ ಮರು ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಮನವಿ’

ರಾಯಚೂರು: 545 ಪಿಎಸ್ ಐ ಮರು ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು ಎಂದು ಜಿಲ್ಲೆಯ ಸ್ಪರ್ಧಾಕಾಂಕ್ಷಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

2024ರ ಜನವರಿ 23ರಂದು ಹೈಕೋರ್ಟ್ ಆದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾರ್ಚ್ 1 ರಂದು ಅಂತಿಮ ಫಲಿತಾಂಶ ಪಟ್ಟಿ ಬಿಡುಗಡೆ ಮಾಡಿದ್ದು, ಈ ಸಂತಿಮ ಪಟ್ಟಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಆಯ್ಕೆ ಪಟ್ಟಿ ತಯಾರಿಸಲು ಸೂಚಿಸಿದ್ದು, ಆದೇಶದಂತೆ ಶೀಘ್ರವೇ ನೇಮಕಾತಿ ವಿಭಾಗ 545 ಪಿಎಸ್ಐ ತಾತ್ಕಾಲಿ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಈ ಬಗ್ಗೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ, ಡಿ.ಜಿ ಮತ್ತು ಎಡಿಜಿಪಿ ನೇಮಕಾತಿ ವಿಭಾಗ ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷೆ ಬರೆದು 6 ತಿಂಗಳಾದರೂ ಆಯ್ಕೆಪಟ್ಟಿ ಪ್ರಕಟಿಸದ ಕಾರಣ ಚಿಂತಿಗೀಡು ಮಾಡಿದೆ. ಈಗಲಾದರೂ ಮರು ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು ಎಂದು ಸ್ಪರ್ಧಾ ಆಕಾಂಕ್ಷಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Latest Indian news

Popular Stories