ಕ್ರೀಡೆಗಳಿಂದ ದೈಹಿಕ, ಮಾನಸಿಕ ಅಭಿವೃದ್ಧಿ: ಎ.ಪಾಪಾರೆಡ್ಡಿ

ರಾಯಚೂರು: ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸಾಮರ್ಥ್ಯ ಬೆಳೆಯುತ್ತದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ತಿಳಿಸಿದರು.

ನಗರದ ರಾಂಜೇಂದ್ರ ಗಂಜ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಮುನ್ನೂರುಕಾಪು ಸಮಾಜದ ವತಿಯಿಂದ ಈ ನಿಟ್ಟಿನಲ್ಲಿ ಮುನ್ನೂರುಕಾಪು ಸಮಾಜದ ವತಿಯಿಂದ ಮುಂಗಾರು ಸಾಂಸ್ಕೃತಿ ರಾಯಚೂರು ಹಬ್ಬ ನಡೆಸುವುದರ ಮೂಲಕ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು, ಹಳ್ಳಿಯ ಸೊಗಡು ಅನಾವರಣಗೊಳಿಸಲಾಗುತ್ತದೆ. ಸಮಾಜದ ಬೆಳವಣಿಗೆಗೆ ಯುವಕರ ಪಾತ್ರ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಯುವಕರಿಗೆ ಕ್ರೀಡೆಗಳ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಹಣ ಗಳಿಸುವುದು ಮುಖ್ಯವಲ್ಲ, ಸಂಸ್ಕಾರ, ಸಂಸ್ಕೃತಿ, ಆರೋಗ್ಯ ಮುಖ್ಯ. ಕೃಷಿಯನ್ನೇ ಮೂಲ ಕಸುಬು ಮಾಡಿಕೊಂಡಿದ್ದ ಮುನ್ನೂರುಕಾಪು ಸಮಾಜದ ಯುವಕರು ವಾಣಿಜ್ಯ– ವ್ಯವಹಾರ, ವೈದ್ಯಕೀಯ, ಸರ್ಕಾರಿ ಹುದ್ದೆ ಪಡೆಯಲು ಚಿತ್ತ ಹರಿಸಿದ್ದು ಅನೇಕರು ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಆರ್ ಕೆ. ಅಮರೇಶ, ಡಿ. ಗೋಪಾಲ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಪಿ. ಶ್ರೀನಿವಾಸ ರೆಡ್ಡಿ, ಜಿ ತಿಮ್ಮರೆಡ್ಡಿ, ಬಿ ರಾಘವೇಂದ್ರ, ಜಿ ಮಹೇಂದ್ರ ರೆಡ್ಡಿ, ಬಂಗಿ ಮುನಿರೆಡ್ಡಿ, ಜಿ. ವೀರೇಶ ರೆಡ್ಡಿ, ಪಿ ಮಹೇಂದ್ರ, ಜಿ ವಿಜಯ ರಾಜುರೆಡ್ಡಿ, ವಿನೋದ, ವೆಂಕಟೇಶ, ಪ್ರವೀಣ್, ವಿನಯ್ ರೆಡ್ಡಿ ಉಪಸ್ಥಿತರಿದ್ದರು.

Latest Indian news

Popular Stories