ಬೀದರ : ಕರ್ನಾಟಕ ಸಹಕಾರ ಸಂಘಗಳ ನಿಯಮಗಳು ೧೯೬೦ರ ನಿಯಮ ೧೪(೧) ಅನುಸಾರವಾಗಿ ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬೀದರನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳನ್ನು ತುಂಬಲು ಅಕ್ಟೋಬರ್ ೪ ರಂದು ಚುನಾವಣೆ ನಡೆಯಲಿವೆ.
ಸದರಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಅರ್ಹ ಮತದಾರರಿಗೆ ಮತದಾನ ಮಾಡಲು ಅನುವಾಗುವಂತೆ ಮತದಾನ ದಿನದಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್.ನಿ. ಬೀದರ ಕೇಂದ್ರ ಕಛೇರಿಗೆ ಮಾತ್ರ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.