ಮಂಗಳೂರು: ಕೇಸರಿ ಸಭಾಂಗಣದಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ

ಮಂಗಳಳೂರು : ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್ ಕೇಸರಿ ಮಾತ್ರ ಮಂಡಳಿ ವತಿಯಿಂದ ಕೇಸರಿ ಸಭಾಂಗಣದಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಕುಂಪಲ ಮಾತನಾಡುತ್ತಾ, ಮಣ್ಣಿನ ಋಣ ದೇಶದ ಋಣ ತೀರಿಸಲು ಸಾಧ್ಯವಿಲ್ಲ ಆದರೆ ಇಂತಹ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ದೇಶದ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸುವ ಅವಕಾಶ ನಮಗೆ ದೊರೆತಿದೆ.

ಅದೇ ರೀತಿ ಈ ಮಣ್ಣಿನಲ್ಲಿ ಮಣ್ಣಾಗಿ ಹೂಗುವ ಮೊದಲು ಈ ಮಣ್ಣನ್ನು ಗೌರವಿಸುವ ಪುಣ್ಯದ ಕಾರ್ಯ ಮಾಡೋಣ ಸ್ವಚ್ಛತೆ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ಮಾಡೋಣ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಅವಕಾಶ ನಮಗೆ ಸಿಗದಿರಬಹುದು ಆದರೆ ಈ ದೇಶಕ್ಕಾಗಿ ಬದುಕುವ ದೇಶದ ಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ. ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಮಣ್ಣಿನ ಋಣ ದೇಶದ ಋಣ ಕನಿಷ್ಠ ಮಟ್ಟಿಗಾದರೂ ತೀರಿಸಲು ಪ್ರಯತ್ನ ಮಾಡೋಣ ಎಂದು ಹೇಳಿದರು.

ಅಧ್ಯಕ್ಷರಾದ ಶ್ರೀ ಭಗವಾನ್ ದಾಸ್ ಕಾರ್ಯದರ್ಶಿ ಶ್ರೀ ನವೀನ್ ಕುಮಾರ್ ಕೋಶಾಧಿಕಾರಿ ಶ್ರೀ ರಾಕೇಶ್ ಬೇಕಲ್ ನಿವ್ರತ್ತ ಸೇನಾನಿಗಳಾದ ಶ್ರೀ ವೆಂಕಟೇಶ ಕುಂಪಲ ಶ್ರೀ ಸುಧಾಕರ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories