ಬೀದರ್ : ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ 5ವರನ್ನು ಗಾಂಧಿಗಂಜ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಾರ್ಜುನ್ ಸ್ವಾಮಿ,ಕುಮಾರ್ ಕಂಟೆಪ್ಪ ಕುಡತೆನೂರ, ಮನೋಜ ಕುಮಾರ್ ಮುರಳಿ,ಶಿವರಾಜ್ ಬಸವಲಿಂಗಯ್ಯ, ವಿಜಯಕುಮಾರ್ ಬಸವಣಪ್ಪ ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ 500 ರೂ ಮುಖ ಬೆಲೆವುಳ್ಳ 13 ಖೋಟಾ ನೋಟುಗಳು,ಲ್ಯಾಪ್ ಟಾಪ್,ಪ್ರಿಂಟರ್,ಪ್ರಿಂಟಿಂಗ್ ಬೋರ್ಡ್ ಹಾಗೂ ಇನ್ನಿತರ ಸಾಮಗ್ರಿಗಳು ಸೇರಿದಂತೆ ಒಟ್ಟು 25 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು,
ಆರೋಪಿಗಳು ನಕಲಿ ನೋಟು ಪ್ರಿಂಟ್ ಮಾಡಿ ಮದ್ಯ ಅಂಗಡಿಗಳಲ್ಲಿ ಚಲಾವಣೆ ಮಾಡುತ್ತಿದ್ದು,ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.