ನಗರಸಭೆ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿ Bidar

ಬೀದರ್ ಏಪ್ರಿಲ್ ೨೩ (ಕರ್ನಾಟಕ ವಾರ್ತೆ): Bidar ಬೀದರ ನಗರಸಭೆ ಸಾರ್ವತ್ರಿಕ ಚುನಾವಣೆ ಮತ್ತು ಹಳ್ಳಿಖೇಡ್ ಬಿ ಪುರಸಭೆಯ ಉಪ ಚುನಾವಣೆಯ ಮತಗಟ್ಟೆಗಳ ಕಾರ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಪೊಲಿಂಗ್ ಅಧಿಕಾರಿಗಳಿಗೆ ನಗರದ ನಗರದ ಪೂಜ್ಯ ಶ್ರೀ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮAದಿರದಲ್ಲಿ ಏಪ್ರಿಲ್ ೨೩ ರಂದು ಪೂರ್ವಭಾವಿ ಸಿದ್ಧತಾ ಚುನಾವಣಾ ತರಬೇತಿ ನಡೆಯಿತು.
ಈ ವೇಳೆ ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರು ಮಾತನಾಡಿ, ಏಪ್ರೀಲ್ ೨೭ರಂದು ಮತದಾನ ನಡೆಯಲಿದೆ. ಮತದಾನದಿನದಂದು ಪ್ರತಿಯೊಬ್ಬರು ಜವಾವ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಇರುವುದಿಲ್ಲ. ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್‌ಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್‌ಗಳನ್ನು ಸರಿಯಾಗಿ ಬಳಸಬೇಕು. ಬ್ಯಾಲೆಟ್ ಯುನಿಟ್‌ನಲ್ಲಿ ಅಳವಡಿಸಿರುವ ಮತಪತ್ರ ಸರಿಯಾಗಿ ಪಂಕ್ತಿಕರಣಗೊಳಿಸಿರಬೆಕು. ಮತ್ತು ಈ ಬ್ಯಾಲೆಟ್ ಯುನಿಟ್‌ನಲ್ಲಿ ಕಾಣುವ ಉಮೇದುವಾರರ ಬಟನ್‌ಗಳು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಸವiನಾಗಿರಬೇಕು. ಈ ಯುನಿಟ್‌ನಲ್ಲಿ ಅಡ್ರೆಸ್ ಟ್ಯಾಗ್‌ನೊಂದಿಗೆ ಸೀಲ್ ಮಾಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಸಮಗ್ರ ವಿವರಿಸಿದರು.
ಮತಗಟ್ಟೆಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮಾವಳಿಯ ಪೋಸ್ಟರ್ ಹಾಕಬೇಕು. ಮತಗಟ್ಟೆ ಕೊಠಡಿಯಿಂದ ೧೦೦ ಮೀಟರ್ ಗುರುತು ಹಾಕಬೇಕು. ಮತ್ತು ಆ ವ್ಯಾಪ್ತಿಯ ಒಳಗಡೆ ಯಾವುದೇ ಪಕ್ಷದ ಅಥವಾ ಉಮೇದುವಾರರ ಭಿತ್ತಿ ಪತ್ರ ಪೋಸ್ರ‍್ಸ್ ಇತರೆ ಯಾವುದಾದರು ಇದ್ದಲ್ಲಿ ತೆಗೆದು ಹಾಕÀಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಗಂಗಾದೇವಿ ಸಿ.ಎಚ್. ಹಾಗೂ ಇನ್ನೀತರ ಸಿಬ್ಬಂದಿ ಇದ್ದರು.

Latest Indian news

Popular Stories