ಫೇಸ್‌ಮಾಸ್ಕ್ ಹಾಕದವರಿಗೆ 1,51,000 ರೂ.ದಂಡ

ಬೀದರ (ಕರ್ನಾಟಕ ವಾರ್ತೆ): ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಕರ್ನಾಟಕ ಎಪಿಡೇಮಿಕ್ ಡೀಸಿಸ್ ಆಕ್ಟ್-2020 ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಬೀದರ ಜಿಲ್ಲೆಯಲ್ಲಿ 01 ಪ್ರಕರಣ ಹಾಗೂ ಫೇಸ್ ಮಾಸ್ಕ್ ಹಾಕದವರಿಗೆ ಒಟ್ಟು 1510 ಪ್ರಕರಣಗಳು ಹಾಕಿ 1,51,000 ರೂ.ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು, ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಅಂತಾ ಆದೇಶವಿದ್ದರು ಸಹ ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಸಂಚರಿಸಿದವರ 214 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗಿದೆ. ಇನ್ನೂ ಮುಂದೆ ಸಾರ್ವಜನಿಕರು ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Latest Indian news

Popular Stories