
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರ ಅಧ್ಯಕ್ಷತೆಯಲ್ಲಿ ಸಭೆ
ಬೀದರ ನಗರದ ಸಮಗ್ರ ಅಭಿವೃದ್ಧಿಗೆ ಹಲವು ನಿರ್ಣಯ
ಬೀದರ ಜೂನ್ 17 (ಕರ್ನಾಟಕ ವಾರ್ತೆ): ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ ಅವರ ಅಧ್ಯಕ್ಷತೆಯಲ್ಲಿ ಜೂನ್ 17ರಂದು ಪ್ರಾಧಿಕಾರದ ಕಚೇರಿಯಲ್ಲಿ ಸಭೆ ನಡೆಯಿತು.
ಬೀದರ ನಗರದ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದAತೆ ಹಾಗೂ ಮುಂಬರುವ ದಿನಗಳಲ್ಲಿ ನಗರದ ಅಭಿವೃದ್ಧಿಗಾಗಿ ಇನ್ನು ಹೆಚ್ಚಿನ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಸಂಬAಧಿಸಿದAತೆ ಸಲಹೆಗಳನ್ನು ನೀಡಲು ಅಧ್ಯಕ್ಷರಾದ ಬಾಬು ವಾಲಿ ಅವರು ಕೋರಿದರು.
ಸಭೆಯಲ್ಲಿ ಹಾಜರಿದ್ದ ಶಾಸಕರಾದ ರಹೀಮ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ ಅರವಿಂದಕುಮಾರ ಅರಳಿ ಸೇರಿದಂತೆ ಇನ್ನೀತರರು ಸಭೆಗೆ ಹಲವಾರು ಸಲಹೆಗಳನ್ನು ನೀಡಿದರು.
ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಪ್ರಾಧಿಕಾರದ ಅಧಿಕಾರಿ ಸದಸ್ಯರುಗಳ ಸಲಹೆ ಮೇರೆಗೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಉದ್ಯಾನವನಗಳಲ್ಲಿ ಪ್ರತಿ ಭಾನುವಾರ ಸಸಿ ನೆಟ್ಟಿ ನೈಸರ್ಗಿಕವಾಗಿ ಬೀದರ ನಗರದ ಸೌಂದರ್ಯೀಕರಣ ಹೆಚ್ಚಿಸುವುದು ಸೇರಿದಂತೆ ಬೀದರ ನಗರದ ಅಭಿವೃದ್ಧಿಗಾಗಿ ಅನೇಕ ಮಹತ್ವದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಬೀದರ ನಗರದ ಮಹಾಯೋಜನೆ (ಸಿ.ಡಿ.ಪಿ) ಅಭಿವೃದ್ಧಿ ಕುರಿತು, ಪ್ರಾಧಿಕಾರದಿಂದ ಅನುಮೋದನೆಗೊಳ್ಳುವ ವಿನ್ಯಾಸಗಳಿಗೆ ಗೆಟೇಡ್ ಕಮ್ಯುನಿಟಿ (ಸುತ್ತೂಗೋಡೆ) ನಿರ್ಮಾಣ ಮಾಡುವುದು ತಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಾಧಿಕಾರದಿಂದ ಕರಡು ವಿನ್ಯಾಸಗಳಲ್ಲಿ ನಿವೇಶನಗಳನ್ನು ಅನಧೀಕೃತವಾಗಿ ಖಾತೆ ಮಾಡಿ ನೋಂದಣಿಯಾಗುತ್ತಿರುವುದನ್ನು ತಡೆಗಟ್ಟುವುದಕ್ಕೆ ಸಂಬAಧಿಸಿದAತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮವಹಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಒತ್ತುವರಿ ತೆರವು ನಿರ್ಣಯ: ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆಗೊಂಡ ಉದ್ಯಾನವನಗಳನ್ನು ನಿರ್ವಹಣೆಗಾಗಿ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರ್ಣಯಿಸಲಾಯಿತು. ಈಗಾಗಲೇ ಪ್ರಾಧಿಕಾರದಿಂದ ತೆರವುಗೊಳಿಸಲಾದ ಉದ್ದೇಶಿತ ಮಹಾಯೋಜನೆಯ ರಸ್ತೆಯನ್ನು ಶಾಸಕರ ಅನುದಾನದೊಂದಿಗೆ ಸಿ.ಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಣಯಿಸಲಾಯಿತು. ಪ್ರಾಧಿಕಾರದ ವ್ಯಾಪ್ತಿಗೆ ಬರುವ ಸರ್ಕಾರಿ ಜಮೀನು, ಕೆರೆ ಹಾಗೂ ಅನಧೀಕೃತ ವಿನ್ಯಾಸಗಳ ಒತ್ತುವರಿಯನ್ನು ತೆರವುಗೊಳಿಸಲು ನಿರ್ಣಯಿಸಲಾಯಿತು.
ಪಾಪನಾಶ ಕೆರೆ ಅಭಿವೃದ್ಧಿ: ಅಧ್ಯಕ್ಷರಾದ ಬಾಬುವಾಲಿ ಅವರ ಪ್ರಸ್ತಾವನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಪ್ರಸ್ತಾವನೆಯ ಮೇರೆಗೆ ನಗರದ ಐತಿಹಾಸಿಕ ತಾಣವಾದ ಪಾಪನಾಶ ಕೆರೆಯನ್ನು ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿ ಪ್ರವಾಸೋದ್ಯೋಮವನ್ನು ಉತ್ತೇಜಿಸಿ ಪ್ರವಾಸಿ ತಾಣವನ್ನಾಗಿ ಮಾಡುವುದು ಹಾಗೂ ಇದಕ್ಕೆ ತಗಲುವು ವೆಚ್ಚವನ್ನು ಕೆರೆ ಅಭಿವೃದ್ಧಿ ನಿಧಿಯಿಂದ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಗಣೇಶ ವಿಸರ್ಜನೆಯ ಹೊಂಡ ನಿರ್ಮಾನಕ್ಕೆ ಪ್ರಸ್ತಾವನೆ: ಬೀದರ ನಗರದಲ್ಲಿ ಐತಿಹಾಸಿಕ ಗಣೇಶ ಉತ್ಸವದ ಮೂರ್ತಿ ವಿರ್ಸಜನೆಯನ್ನು ಮಾಡಲು ಅನಾನುಕೂಲವಾಗುತ್ತಿದೆ. ಹೀಗಾಗಿ ನಗರದಲ್ಲಿ ಒಂದು ಸುರ್ಸಜಿತವಾದ ಗಣೇಶ ವಿಸರ್ಜನೆಯ ಹೊಂಡವನ್ನು ನಿರ್ಮಿಸುವುದು ಅತೀ ಅಗತ್ಯವಿದೆ ಎಂದು ಬಾಬು ವಾಲಿ ಅವರು ಸಲ್ಲಿಸಿದ ಪ್ರಸ್ತಾವನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ಪ್ರಾಧಿಕಾರದ ವಸತಿ ಅಭಿವೃದ್ಧಿ ಯೋಜನೆಯಾದ ಗೋರನಳ್ಳಿ (ಬಿ) ಗ್ರಾಮದ ಸರ್ವೆ ನಂ:22/1 (ಸನ್ಮಾನ್ಯ ಶ್ರೀ. ಬಿ.ಎಸ್. ಯಡಿಯೂರಪ್ಪಾ ಬಡಾವಣೆ) ರಲ್ಲಿ ಕಾಯ್ದಿರಿಸಿದ ಉದ್ಯಾನವನ (ಎಸ್.ಟಿ.ಪಿ ಬಫರ್ ಝೋನ್ಗೆ ಹೊಂದಿಕೊAಡು) ದಲ್ಲಿ ಕೆ.ಕೆ.ಆರ್.ಡಿ.ಬಿ ಸಹಯೋಗ ಹಾಗೂ ಅನುದಾನದಿಂದ ನಿರ್ಮಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಭಯ್ಕುಮಾರ, ಪ್ರಾಧಿಕಾರದ ಅಧಿಕಾರಿ ಸದಸ್ಯರುಗಳಾದ ಡಿ.ಎಸ್.ಪಿ ಶ್ರೀ ಕೆ.ಎಮ್. ಸತೀಶ, ಜೆಸ್ಕಾಂನ ಎ.ಇ.ಇ ರಮೇಶ, ಕೆ. ಪಾಟೀಲ, ಲೋಕೋಪಯೋಗಿ ಇಲಾಖೆಯ ಇ.ಇ. ಎನ್. ಲಿಂಗರಾಜು, ನಗರಸಭೆಯ ಎ.ಇ.ಇ ರಾಜಶೇಖರ ಮಠ, ಕ.ನ.ನೀ.ಸ ಮತ್ತು ಒ.ಚ. ಮಂಡಳಿಯ ಜೆ.ಇ. ಅರವಿಂದ ಸಿ. ಬೋರಾಳೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ನ.ಯೋ.ಸ ಶ್ರೀ. ನರೇಂದ್ರ ಕುಮಾರ ಹಾಗೂ ಇನ್ನೀತರರು ಇದ್ದರು.




