RAIN: ಬೀದರ್ ನ ಹಲವೆಡೆ ತಂಪೆರೆದ ವರುಣ

ಬಿಸಿಲಿನ ಬೇಗೆಯಿಂದ ಬೇಸೆತ್ತಿದ್ದ ಬೀದರ್ ಜನರಿಗೆ ಭಾನುವಾರ ಸಂಜೆ ಸುರಿದ ಮಳೆ ಆಹ್ಲಾದವನ್ನು ಉಂಟು ಮಾಡಿತು.

ಬೀದರ್, ಔರಾದ ಮತ್ತು ಕಮಲನಗರ ತಾಲೂಕು ಸೇರಿದಂತೆ ಹಲವೆಡೆ ಸಂಜೆ ಬಿರುಗಾಳಿಯೊಂದಿಗೆ ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ.

ಔರಾದನ ಚಿಕ್ಲಿ ಗ್ರಾಮದ ಕೆಲವು ಮನೆಗಳ ಶೀಟುಗಳು ಹರಿ ಹೋಗಿದ್ದು, ಕೆಲವೆಡೆ ವಿದ್ಯುತ್ ಕಂಬ ಮತ್ತು ಮರಗಳು ಧರೆಗೆ ಉರುಳಿವೆ.

ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ರಾಜ್ಯಾದ್ಯಂತ ಜನರು ಬಸವಳಿದಿದ್ದು, ಬೀದರ್ ನಲ್ಲಿ ಭಾನುವಾರ ಸುರಿದ ಮಳೆ ಶೀಘ್ರದಲ್ಲೇ ಮಳೆಯಾಗಬಹುದು ಎನ್ನುವ ನಿರೀಕ್ಷೆ ಮೂಡಿಸಿದೆ.

Latest Indian news

Popular Stories