ಆಫ್ರಿಕಾದ ಸಂತನಿಗೆ ಕಾರವಾರದಲ್ಲಿ ದೇವಸ್ಥಾನ ಹಾಗೂ ವರ್ಷಕ್ಕೊಮ್ಮೆ ಜಾತ್ರೆ | ಮದ್ಯವೇ ನೈವೇದ್ಯ

ಕಾರವಾರ : ಆಫ್ರಿಕಾದ ದಿಂದ ಬಂದು ಕಾರವಾರದಲ್ಲಿ ನೆಲಸಿದ ಖಾಫ್ರಿ ಸಂತನಿಗೆ ದೇವಸ್ಥಾನ ನಿರ್ಮಿಸಲಾಗಿದೆ. ಪೋರ್ಚುಗೀಸರ ಅವಧಿಯಲ್ಲಿ ಭಾರತಕ್ಕೆ ಬಂದು ,ಕಾರವಾರದಲ್ಲಿ ನೆಲಸಿ, ಜನರ ಬೇಡಿಕೆಗಳನ್ನು ಈಡೇರಿಸುತ್ತಿದ್ದ ಖಾಪ್ರಿ ಎಂಬ ಸಂತ ಕೋಡಿಭಾಗದಲ್ಲಿರುವ ದೇವಸ್ಥಾನದ ಬಳಿ ವರ್ಷಕ್ಕೊಮ್ಮೆನಡೆಯುವ ಖಾಪ್ರಿ ದೇವರ ಜಾತ್ರೆ ವಿಭಿನ್ನವಾಗಿದೆ. ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಖಾಪ್ರಿ ಸಂತ ದೇವರ ಜಾತ್ರೆ ರವಿವಾರ ನಡೆಯಿತು.
ಭಕ್ತರು ಮದ್ಯದಿಂದಲೇ ಈ ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯ ಇಲ್ಲಿದೆ. ಸಂತನಿಗೆ ಇಷ್ಟವಾಗುವ ಮದ್ಯದ ಹರಕೆ ಸಲ್ಲಿಸಿದ ಭಕ್ತರು, ಬೀಡಿ-ಸಿಗರೇಟ್‌ನಿಂದಲೇ ಆರತಿ ಬೆಳಗಿದರು. ನಂತರ ಹರಕೆಯಾಗಿ ಕೋಳಿ ಸಹ ನೀಡಲಾಗುತ್ತಿದೆ. ಭಕ್ತರು ನೀಡಿದ ಹರಕೆಯ ಕೊಳಿ ಬಳಸಿ,ಭಕ್ತರಿಗೆ ದಾಸೋಹ ಸಹ ನಡೆಯಿತು.

ಖಾಪ್ರಿ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ಸಂತ ದೇವರಿಗೆ ಪೂಜೆ ಸಲ್ಲಿಸಿದರು. ಹರಕೆ ಕಟ್ಟಿಕೊಂಡು ಬರುವ ಭಕ್ತರು ಸಿಗರೇಟ್​​ ಮತ್ತು ಕ್ಯಾಂಡಲ್‌ನಿಂದ ಆರತಿ ಮಾಡಿ ಮದ್ಯದಿಂದಲೇ ಅಭಿಷೇಕವನ್ನೂ ಮಾಡುತ್ತಾರೆ. ಅಷ್ಟೇ ಅಲ್ಲ, ದೇವರಿಗೆ ಕೋಳಿ ಬಲಿ ಕೊಟ್ಟು, ರಕ್ತದಿಂದ ನೈವೇದ್ಯ ಮಾಡುತ್ತಾರೆ.ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಪ್ರತೀ ವರ್ಷ ಸಂಪ್ರದಾಯ ದಂತೆ ಖಾಪ್ರಿ ದೇವರಿಗೆ ಫಲ ಪುಷ್ಪ ಸಮರ್ಪಿಸಿ , ಹಣ್ಣು ತೆಂಗುನ ಕಾಯಿ, ಬಾಳೆಗಿನೆ ಜೊತೆಗೆ ಸಾರಾಯಿ, ಸಿಗರೇಟ್ ಮತ್ತು ಕೋಳಿಯನ್ನೂ ಭಕ್ತರು ಅರ್ಪಿಸಿದರು.

ಖಾಪ್ರಿ ಜಾತ್ರೆಗೆ ಕಾರವಾರ ಹಾಗೂ ಪಕ್ಕದ ಗೋವಾ, ಮಹಾರಾಷ್ಟ್ರದಿಂದಲ್ಲೂ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆ ಸಲ್ಲಿಸಿದರು.
…….

Latest Indian news

Popular Stories