ಬೀದರ್: ವಿವಿಧೆಡೆ ಸಾಗರ ಖಂಡ್ರೆ ಮತಯಾಚನೆ

ಜಿಲ್ಲೆಯ ಹುಲಸೂರೂ ಸಮೀಪದ ಸಾಯಗಾಂವ್ ಹೋಬಳಿಯ ಅಟ್ಟರಗಾ ಸೇರಿದಂತೆ ಇತರ ಗ್ರಾಮಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಬುಧುವಾರ ಮತಯಾಚನೆ ಮಾಡಿದರು.

ಮೇಹಕರ, ಅಳವಾಯಿ, ಹಲಸಿ ತುಗಾಂವ್, ವಾಂಝರಖೆಡ, ಇಂಚುರ, ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ‘ಕ್ಷೇತ್ರದ ಅಭಿವೃದ್ಧಿಗಾಗಿ ಒಮ್ಮೆ ಅವಕಾಶ ನೀಡಿ’ ಎಂದು ಕೋರಿದರು

ಬಳಿಕ ಮಾತನಾಡಿದ ಕಾಂಗ್ರೆಸ್ ತಾಲ್ಲೂಕ ಅಧ್ಯಕ್ಷ ಹನುಮಂತರಾವ ಚವ್ಹಾಣ, ‘ಕಾಂಗ್ರೆಸ್ ಹಿಂದುಳಿದ, ಅಲ್ಪಸಂಖ್ಯಾತರ ಪರವಾದ ಪಕ್ಷ. ಸಾಗರ ಖಂಡ್ರೆ ಕ್ರಿಯಾಶೀಲ ವ್ಯಕ್ತಿಯಾಗಿ, ಸಮಯ ವ್ಯರ್ಥ ಮಾಡದಂತೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಸಾಗರ ಖಂಡ್ರೆ ಮಾತನಾಡಿ, ‘ಭಾಲ್ಕಿ ತಾಲೂಕಿಗೆ ₹225 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ನಡಿತ್ತಿವೆ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ದೂರದೃಷ್ಟಿ ಇದ್ದು ತಂದೆ ಈಶ್ವರ ಖಂಡ್ರೆ ಅವರ ಮಾದರಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪವಿದೆ. ಬೀದರ್ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅವಕಾಶ ನೀಡಬೇಕು’ ಎಂದರು.

Latest Indian news

Popular Stories