ಶ್ರವಣಕುಮಾರ ಡಿ. ನಾಯಕ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೊಂಡ ಸಂಘದಿಂದ ಪ್ರತಿಭಟನೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರದ ಹನುಮಾನ ನಗರದ ಲಕ್ಷö್ಮಣ ಮಾಣಿಕಪ್ಪ ಅವರು ಪರಿಶಿಷ್ಟ ಪಂಗಡದ ಗೊಂಡ ಸಮುದಾಯಕ್ಕೆ ಸೇರಿದ್ದರು. ಅವರ ಮಗಳು ಮೀನಾಕ್ಷಿ ಜೆಸ್ಕಾಂನಲ್ಲಿ ಸಹಾಯಕ ಲೆಕ್ಕ ಅಧೀಕ್ಷಕ ಹುದ್ದೆಗೆ ನೇಮಕಗೊಂಡಿದ್ದರು. ಶಾಲಾ ದಾಖಲೆಗಳಲ್ಲಿ ಗೊಂಡ ಇದ್ದ ಕಾರಣ ಅಧಿಕಾರಿಗಳು ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಯೋಗ್ಯರು ಎಂದು ವರದಿ ಸಲ್ಲಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅವರು ಪ್ರಸ್ತಾವ ರದ್ದುಪಡಿಸಿದರು. ಬಳಿಕ ಮೀನಾಕ್ಷಿ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಕಲಬುರಗಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸುಳ್ಳು ಜಾತಿ ತಡೆ ಹೋರಾಟ ಸಮಿತಿಯ ಅಧ್ಯಕ್ಷ ಶ್ರಾವಣಕುಮಾರ ಡಿ. ನಾಯಕ್ ಮೀನಾಕ್ಷಿ ಅವರು ಪರಿಶಿಷ್ಟ ಪಂಗಡದ ಗೊಂಡ ಸಮುದಾಯಕ್ಕೆ ಸೇರಿಲ್ಲ ಎಂದು ಸುಳ್ಳು ದೂರು ದಾಖಲಿಸಿದ್ದರು.ಇದರಿಂದಾಗಿ ತನ್ನ ಮಗಳಿಗೆ ಸರ್ಕಾರಿ ನೌಕರಿ ಸಿಗಲಿಲ್ಲ ಎಂದು ಲಕ್ಷö್ಮಣ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ರಕ್ತದೊತ್ತಡ, ಮಧುಮೇಹ ಹಾಗೂ ಇತರ ರೋಗಗಳು ಅವರನ್ನು ಆವರಿಸಿಕೊಂಡಿದ್ದವು. ಪರಿಶಿಷ್ಟ ಪಂಗಡಗಳ ಆಯೋಗದ ವಿಚಾರಣೆಗಾಗಿ ಬೆಂಗಳೂರಿಗೆ ಹೋಗುವಾಗ ಲಕ್ಷö್ಮಣ ಅವರು ಖಿನ್ನತೆಗೆ ಒಳಗಾಗಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಆದ್ದರಿಂದ ಲಕ್ಷö್ಮಣ ಅವರ ಸಾವಿಗೆ ಕಾರಣರಾದ ಶ್ರಾವಣಕುಮಾರ ವಿರುದ್ಧ ಪ್ರಕರಣ ದಾಖಲಿಸಬೇಕು. ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಂದು ಬೀದರ ನಗರದಲ್ಲಿ ಜಿಲ್ಲಾ ಗೊಂಡ ಸಂಘದಿAದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಸಂತೋಷಕುಮಾರ ಜೋಳದಾಪಕೆ, ಕಾರ್ಯದರ್ಶಿಗಳಾದ ಸುನೀಲ ಚಿಲ್ಲರ್ಗಿ, ಬಾಬುರಾವ ಲದ್ದೆ, ವಿಠಲರಾವ ಭಂಗೂರೆ, ಸುನೀಲ ಖಾಶೆಂಪೂರ, ತಾನಾಜಿ ತೋರಣೆಕರ್, ಬೊಮ್ಮಗೊಂಡ ಚಿಟ್ಟಾವಾಡಿ, ಎಂ ಪಿ ವೈಜಿನಾಥ, ಅನೀಲ ಚಿಲ್ಲರ್ಗಿ, ತುಕಾರಾಮ ಚಿಲ್ಲರ್ಗಿ, ರವಿ ಸಿರ್ಸಿ, ಕಲ್ಲಪ್ಪಾ ಶಾಹಾಪೂರ, ವಿಠಲ್ ಹಳೆಂಬೂರ, ಮಲ್ಲಿಕಾರ್ಜುನ ತಾಳಮಡಗಿ, ಸಿದ್ದುಗೊಂಡ ಸಿದ್ಧೆಶ್ವರ, ಶ್ರಿಕಾಂತ ಗೊರನಳ್ಳಿ, ವೆಂಕಟ ಚಿದ್ರಿ, ಸಾಗರ ಸಿದ್ಧೆಶ್ವರ, ಸಂಜು ಜಾಂಪಡ ಇದ್ದರು.

Latest Indian news

Popular Stories