ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ; ಶಾಲೆಗೆ ಹೋಗಿ ವಾಪಸಾದ ವಿದ್ಯಾರ್ಥಿಗಳು

ಮೂಡಿಗೆರೆ:  ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಪರಿಣಾಮ ಶುಕ್ರವಾರ ಕಳಸ ತಾಲೂಕಿನ ಶಾಲೆಗಳಿಗೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದಾರೆ.

ಬೆಳಗ್ಗಿನ ವರೆಗೂ ರಜೆಯ ಯಾವುದೇ ಸೂಚನೆ ಇರದ ಕಾರಣ ಮಕ್ಕಳು ಬೆಳಿಗ್ಗೆ ಶಾಲೆಗಳಿಗೆ ತೆರಳಿದ್ದಾರೆ ಈ ವೇಳೆ ತಹಸೀಲ್ದಾರ್ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಶಾಲೆಯಿಂದ ವಾಪಸ್ಸಾಗಿದ್ದಾರೆ.

ಗುರುವಾರ ರಾತ್ರಿ ಕಳಸ ತಾಲೂಕಿನಾದ್ಯಂತ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

Latest Indian news

Popular Stories