ಮಣಿಪಾಲ: ಹೊತ್ತಿ ಉರಿದ ಕಾರು – ಮಲಗಿದ್ದವರು ಪಾರು!

ಮಣಿಪಾಲ:ರಿಟ್ಸ್ ಕಾರೊಂದು ಹೊತ್ತಿ ಉರಿದ ಘಟನೆ ಮಣಿಪಾಲದಲ್ಲಿ ತಡರಾತ್ರಿ ಸುಮಾರು 1.35ಕ್ಕೆ ಸಂಭವಿಸಿದೆ.

ಕುಂದಾಪುರದಿಂದ ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಪೈಕಿಯವರ ಕಾರು ಎಂದು ತಿಳಿದು ಬಂದಿದೆ.

ಇಬ್ಬರು ವ್ಯಕ್ತಿಗಳು ರಸ್ತೆ ಬದಿ (ಪರ್ಕಳದಿಂದ ಮಣಿಪಾಲಕ್ಕೆ ಬರುವ ರಸ್ತೆಯಲ್ಲಿ MIT ಬಸ್ ನಿಲ್ದಾಣಕ್ಕಿಂತ ಸ್ವಲ್ಪ ಕೆಳಗೆ ಇಳಿಜಾರಿನಲ್ಲಿ) ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರಂತೆ.ಬೆಂಕಿ ಹತ್ತಿಕೊಂಡದ್ದು ಗೊತ್ತಾದ ತಕ್ಷಣ ಇಬ್ಬರೂ ಹೊರಗೆ ಬಂದು ಪಾರಾಗಿದ್ದಾರೆ. ಧಗಧಗಿಸಿ ಉರಿಯುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಮುಕ್ತವಾದ ಕಾರು ಹಿಮ್ಮುಖವಾಗಿ ಚಲಿಸಿದೆ ಎನ್ನಲಾಗಿದೆ.

ಧಗಧಗಿಸುತ್ತಿದ್ದ ಕಾರು ಹಾಗೆಯೇ ರಸ್ತೆಯಲ್ಲಿ ಹಿಂದಕ್ಕೆ ಹೋಗಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ಸುಮಾರು ಎರಡು ಗಂಟೆ ವೇಳೆಗೆ ಉಡುಪಿಯಿಂದ ಧಾವಿಸಿ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು.

1001321558 Udupi
1001321557 Udupi

Latest Indian news

Popular Stories