ಕೋವಿಡ್-19 ಕುರಿತು ಜನಜಾಗೃತಿ ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಮಾಸ್ಕ ವಿತರಣೆ

ಬೀದರ, ಮೇ. ೦೬ಃ ತಾಲೂಕಿನ ಚಿಟ್ಟಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಮೇಶ ಬಿರಾದಾರ ಅವರ ನೇತೃತ್ವದಲ್ಲಿ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್-೧೯ ಕರೋನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರು ತಪ್ಪದೇ ಮಾಸ್ಕ ಧರಿಸಿಕೊಳ್ಳಬೇಕು, ಆಗಾಗ ಸಾಬೂಬಿನಿಂದ ಕೈ ತೋಳೆದುಕೊಳ್ಳಬೇಕು ಹಾಗೂ ಸಾಮಾಜಿಕ ಅಂತರ್ ಕಾಯ್ದುಕೊಳ್ಳಬೇಕು ಎಂದು ಧ್ವನಿವರ್ಧಕದ ಜನಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯತ ವ್ಯಾಪ್ತಿಯ ಚಿಟ್ಟಾವಾಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನಯಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಪಿಡಿಓ ಅವರು ಮಾಸ್ಕ ವಿತರಣೆ ಮಾಡಿದರು. ಅಲ್ಲದೇ ಕೋವಿಡ್-೧೯ ನಿಯಮಗಳು ಪಾಲನೆ ಮಾಡುವ ಮೂಲಕ ಕಾಮಗಾರಿ ಕೈಗೊಳ್ಳಬೇಕು ಎಂದು ಕಾರ್ಮಿಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಚಿಟ್ಟಾ ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶ ಬಿರಾದಾರ ಅವರು ಮಾತನಾಡುತ್ತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಹಾಗೂ ಚಿಟ್ಟಾ ಗ್ರಾಮ ಪಂಚಾಯತ ವತಿಯಿಂದ ದುಡಿಯೋಣ ಬಾ ಅಭಿಯಾನದಡಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಜನರಿಗೆ ಉದ್ಯೋಗ ಖಾತ್ರಿ ಯೋಜನಯಡಿ ಕೆಲಸ ನೀಡಲಾಗಿದೆ ಎಂದರು.
ಈಗಾಗಲೇ ೧೫ ದಿನ ಕೆಲಸ ಮಾಡಿದ ಕಾರ್ಮಿಕರ ಖಾತೆಗೆ ಕೂಲಿ ಹಣ ಜಮೆ ಮಾಡಲಾಗಿದೆ. ಮತ್ತೇ ೧೫ ದಿನ ಕೆಲಸ ನೀಡಲಾಗಿದೆ. ದಿನವೊಂದಕ್ಕೆ ೨೮೯ ರೂ ಕೂಲಿ ಹಣ ನೀಡಲಾಗುತ್ತಿದೆ. ಕೋವಿಡ್-೧೯ ೨ನೇ ಅಲೆ ಎಲ್ಲಡೆ ವ್ಯಾಪಕವಾಗಿ ವ್ಯಾಪಿಸಿದೆ. ಹೀಗಾಗಿ ಕೂಲಿ ಕಾರ್ಮಿಕರಿಗೆ ಮಾಸ್ಕ ವಿತರಣೆ ಮಾಡಲಾಗಿದೆ ಎಂದರು.
ಪAಚಾಯತ ಅಭಿವೃದ್ಧಿ ಅಧಿಕಾರಿ ಭೀಮರಾವ ಅವರು ಮಾತನಾಡುತ್ತ, ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದಕ್ಕೆ ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳಿಂದ ಗ್ರಾಮಕ್ಕೆ ಬಂದ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಲಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದರು.
ಪಧವಿದರ ವಿದ್ಯಾರ್ಥಿ ರಾಕೇಶ ಅವರು ಮಾತನಾಡುತ್ತ, ರಾಜ್ಯ ಸರ್ಕಾರ ಕೋವಿಡ್-೧೯ ೨ನೇ ಅಲೆ ನಿಯಂತ್ರಣ ಮಾಡುವ ಉದ್ದೇಶದಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ನಾನೂ ಉದ್ಯೋಗ ಖಾತ್ರಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಕೂಲಿ ಹಣ ಉಪ ಜೀವನಕ್ಕೆ ಆಸರೆಯಾಗಿದೆ ಎಂದರು.
ಜನತಾ ಕರ್ಫ್ಯೂದಿಂದ ಕೆಲಸವಿಲ್ಲದೇ ತೀವ್ರ ಸಂಕಷ್ಟದಲ್ಲಿದ್ದ ಜನರಿಗೆ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಕಾಮಗಾರಿ ವರದಾನವಾಗಿದೆ. ಕಾಲೇಜು ಇಲ್ಲದ ಕಾರಣ ಗ್ರಾಮದಲ್ಲಿ ಹರಟೆ ಹೊಡೆಯುವ ಬದಲು ಉದ್ಯೋ ಖಾತ್ರಿ ಕೆಲಸ ಮಾಡುವ ಮೂಲಕ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶೋಭಾ, ಬಸವರಾಜ, ರಘುನಾಥ ಮುಂತಾದವರು ಇದ್ದರು.

Latest Indian news

Popular Stories