ಮೇ ೪ರವರೆಗೆ ನೈಟ್ ರ‍್ಪ್ಯು : ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳ ಆದೇಶ Bidar district

ಬೀದರ ಏಪ್ರೀಲ್ ೨೨ (ರ‍್ನಾಟಕ ವರ‍್ತೆ): Bidar district ಬೀದರ್ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ಏಪ್ರೀಲ್ ೨೧ರ ರಾತ್ರಿ ೯ ಗಂಟೆಯಿಂದಲೇ ಅನ್ವಯವಾಗುವಂತೆ ಮೇ ೪ರ ಬೆಳಗ್ಗೆ ೬ ಗಂಟೆಯವರೆಗೆ ನೈಟ್ ರ‍್ಪ್ಯು ಹಾಗೂ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ವಿಕೆಂಡ್ ರ‍್ಪ್ಯು ಸಂರ‍್ಭದಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ ರ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಆದೇಶ ಹೊರಡಿಸಿದ್ದಾರೆ.


ಸರಕಾರದ ಮುಖ್ಯ ಕರ‍್ಯದಶಿಗಳು ಹಾಗೂ ರಾಜ್ಯ ವಿಪತ್ತು ನರ‍್ವಹಣಾ ಸಮಿತಿಯ ಅಧ್ಯಕ್ಷರು ರಾಜ್ಯದಲ್ಲಿ ಕಳೆದ ೨ ವಾರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದರಿಂದ, ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಪಾಲನೆ ಮಾಡುವ ಸಂಬಂಧ ಸರ‍್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ೨೧.೦೪.೨೦೨೧ರ ರಾತ್ರಿ ೯ ಗಂಟೆಯಿಂದ ದಿನಾಂಕ ೦೪.೦೫.೨೦೨೧ರ ಬೆಳಗ್ಗೆ ೬ ಗಂಟೆಯವರೆಗೆ ನೈಟ್ ರ‍್ಫ್ಯು ಹಾಗೂ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ವಿಕೆಂಡ್ ರ‍್ಫ್ಯೂ ಜಾರಿ ಮಾಡಿ ಕಟ್ಟು ನಿಟ್ಟಾಗಿ ಅನುಷ್ಠಾನ ಗೊಳಿಸುವಂತೆ ಕೆಲವು ಮರ‍್ಗಸೂಚಿಗಳೊಂದಿಗೆ ಆದೇಶಿಸಿರುತ್ತಾರೆ.
ಅದರಂತೆ ಬೀದರ್ ಜಿಲ್ಲೆಯಲ್ಲಿ ಕೋವಿಡ್-೧೯ ವೈರಸ್ ಹರಡದಂತೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈ ಗೊಳ್ಳಲಾಗಿದ್ದು, ಸರ‍್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿ ಕೋನದಿಂದ ಜಿಲ್ಲೆಯಾದ್ಯಂತ ೨೧.೦೪.೨೦೨೧ರ ರಾತ್ರಿ ೯ ಗಂಟೆಯಿಂದಲೇ ಅನ್ವಯಾಗುವಂತೆ ದಿನಾಂಕ ೪.೦೫.೨೦೨೧ ರ ಬೆಳಗ್ಗೆ ೬ ಗಂಟೆಯವರೆಗೆ ನೈಟ್ ರ‍್ಫ್ಯು ಹಾಗೂ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಗ್ಗೆ ೬ ಗಂಟೆಯವರೆಗೆ ವಿಕೆಂಡ್ ರ‍್ಫ್ಯೂ ಸಂರ‍್ಭದಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅವಶ್ಯಕವಾಗಿರುವುದರಿಂದ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ ರ ಕಲಂ ೧೪೪ ರನ್ವಯ ನಿಷೇಧಾಜ್ಞೆ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ ರ ಕಲಂ ೧೪೪ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರಕಾರವು ಆದೇಶದಲ್ಲಿ ಹೊರಡಿಸಿರುವ ಮರ‍್ಗಸೂಚಿಗಳಲ್ಲಿನ ಎಲ್ಲಾ ಷರತ್ತುಗಳಿಗೆ ಒಳಪಟ್ಟು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ನೈಟ್ ರ‍್ಫ್ಯೂ ಮರ‍್ಗಸೂಚಿಗಳು : ಪ್ರತಿ ದಿನ ರಾತ್ರಿ ೯ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ವೈಯಕ್ತಿಕವಾಗಿ ಅತ್ಯವಶ್ಯಕ ಚಟುವಟಿಕೆಗಳಿಗೆ ಹೊರತು ಪಡಿಸಿ ಸಂಚಾರ ಮಾಡುವುದನ್ನು ನಿಷೇಧಿಸಿದೆ ರೋಗಿಗಳು ಹಾಗೂ ಅವರ ಸಹಾಯಕರಿಗೆ ತರ‍್ತು ಸಂರ‍್ಭದಲ್ಲಿ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನರ‍್ವಹಿಸುವ ನೌಕರರಿಗೆ ಅನುಮತಿಸಿದೆ. ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್ ನೇಟ್ ಸೇವೆ ಒದಗಿಸುವ ನೌಕರರು, ತರ‍್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಕೆಲಸ ನರ‍್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ಆರೋಗ್ಯ ಮತ್ತು ತರ‍್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು ಸಂಪರ‍್ಣವಾಗಿ ಕರ‍್ಯನರ‍್ವಹಿಸತಕ್ಕದ್ದು ಹಾಗೂ ಇತರೆ ಔದ್ಯಮಿಕ ಚಟುವಟಿಕೆಗಳು ನಿಷೇಧಿಸಿದೆ. ಸರಕು ಸಾಗಾಣಿಕೆಗಳಿಂದ ತುಂಬಿರುವ ವಾಹನಗಳು, ಹೋಮ ಡಿಲೇವರಿ, ಮಾಡುವ ವಾಹನಗಳು, ಇ ಕಾರ‍್ಸ್ ಕಂಪನಿಯ ವಾಹನಗಳು ಸಂಚರಿಸಲು ಅನುಮತಿಸಿದೆ. ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ. ಪ್ರಯಾಣಿಕರಿಗೆ ವೈಯಕ್ತಿಕ, ಸರ‍್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅನುಮತಿಸಿದೆ. ಪ್ರವಾಸದ ಸಂರ‍್ಭದಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು. ಎಲ್ಲಾ ರೀತಿಯ ಕಟ್ಟಡ ಚಟುವಟಕೆಗಳಿಗೆ ಅನುಮತಿಸಿದೆ.
ವಿಕೆಂಡ್ ರ‍್ಫ್ಯೂ ಮರ‍್ಗಸೂಚಿಗಳು: ಕೇಂದ್ರ ಮತ್ತು ರಾಜ್ಯ ಸರಕಾರಿ ವಲಯಗಳಲ್ಲಿ ಹಾಗೂ ಕೋವಿಡ್-೯ ತರ‍್ತು ಪರಿಸ್ಥಿಯಲ್ಲಿ ಕೆಲಸ ನರ‍್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿ, ಸಂಸ್ಥೆ, ತರ‍್ತ ಸೇವೆ ಒದಗಿಸುವ ಸಂಸ್ಥೆಗಳಿಗೆ ೨೪ ಗಂಟೆ ಕೆಲಸ ನರ‍್ವಹಿಸಲು ನೌಕರರಿಗೆ ಅನುಮತಿಸಿದೆ. ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್‌ನೇಟ್ ಸೇವೆ ಒದಗಿಸುವ ನೌಕರರು, ತರ‍್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ.
ಕೆಲಸ ನರ‍್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ರೋಗಿಗಳು ಹಾಗೂ ಅವರ ಸಹಾಯಕರಿಗೆ ಸಂಬಂಧಿಗಳಿಗೆ ತರ‍್ತು ಸಂರ‍್ಭದಲ್ಲಿ ಹಾಗೂ ವ್ಯಾಕ್ಸಿನೇಶನ್ ಪಡೆಯಲು ತೆರಳುವ ಸರ‍್ವಜನಿಕರಿಗೆ ಸಂಚರಿಸಲು ಗುರುತಿನ ಚೀಟಿಯೊಂದಿಗೆ ಅನುಮತಿಸಿದೆ. ಬೆಳಗ್ಗೆ ೬ ಗಂಟೆಯಿಂದ ಬೆಳಗ್ಗೆ ೧೦ ಗಂಟೆವರೆಗೆ ಸರ‍್ವಜನಿಕರಿಗೆ ಅವಶ್ಯಕವಾಗಿರುವ ನೆರೆಹೊರೆ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಹಾಲು, ಮಾಂಸ ಹಾಗೂ ಮೀನು ಮಾರಾಟಕ್ಕೆ ಅನುಮತಿಸಿದೆ. ಅತ್ಯವಶ್ಯಕ ವಸ್ತುಗಳನ್ನು ಮನೆ ವಿತರಣೆ (ಹೋಮ ಡಿಲೆವರಿ) ಮಾಡಲು ಕೋವಿಡ್-೧೯ ನಿಯಮಾವಳಿಯನ್ವಯ ಅನುಮತಿಸಿದೆ.
ರೆಸ್ಟಾರೆಂಟ್ ಮತ್ತು ಕೆಟ್ರಿನ್‌ಗಳಲ್ಲಿ ಪರ‍್ಸಲ್ ವ್ಯವಸ್ಥೆ ಹಾಗೂ ಮನೆ ವಿತರಣೆಗೆ (ಹೋಮ ಡಿಲೆವರಿ) ಅನುಮತಿಸಿದೆ. ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ. ಪ್ರಯಾಣಿಕರಿಗೆ ವೈಯಕ್ತಿಕ, ಸರ‍್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಕೋವಿಡ್-೧೯ ನಿಯಮಾವಳಿಯನ್ವಯ ಅನುಮತಿಸಿದೆ.
ಪ್ರವಾಸದ ಸಂರ‍್ಭದಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು. ಮದುವೆ ಸಮಾರಂಭಗಳಿಗೆ ೫೦ ಜನರಿಗೆ ಮೀರದಂತೆ ಕೋವಿಡ್-೧೯ ಮರ‍್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು. ಅಂತ್ಯ ಕ್ರಿಯೆ, ಶವ ಸಂಸ್ಕಾರಕ್ಕೆ ೨೦ ಜನರಿಗೆ ಮೀರದಂತೆ ಕೋವಿಡ್-೧೯ ಮರ‍್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು.
ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್ಸ್, ಜಿಮ್ ಕೇಂದ್ರಗಳು, ಸ್ಪರ‍್ಟ್ಸ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪರ‍್ಕಗಳು, ಥೇರ‍್ಸ್, ಬಾರ್ ಮತ್ತು ಅಡ್ಯುಟೋರಿಯಮ್ಸ್, ಅಸೆಂಬ್ಲಿ ಹಾಲ್ ಗಳು ಮುಚ್ಚುವಂತೆ ಸೂಚಿಸಿದೆ.
ಎಲ್ಲಾ ಸಾಮಾಜಿಕ, ರಾಜ್ಯಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕçತಿಕ, ಧರ‍್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕರ‍್ಯಕ್ರಮ ನಿಷೇಧಿಸಿದೆ. ಜಿಲ್ಲೆಯ ಎಲ್ಲಾ ಧರ‍್ಮಿಕ ಕೇಂದ್ರಗಳಲ್ಲಿ ಸರ‍್ವಜನಿಕ ಪೂಜೆ ಮಾಡುವುದನ್ನು ನಿಷೇಧಿಸಿದೆ. ದಿನ ನಿತ್ಯದ ಧರ‍್ಮಿಕ ಪೂಜೆ ಕರ‍್ಯಕ್ರಮಗಳನ್ನು ಸರ‍್ವಜನಿಕರು ಇಲ್ಲದೆ ಮುಂದುವರೆಸಲು ಅನುಮತಿಸಿದೆ. ಕಟ್ಟಡ ಚಟುವಟಕೆಗಳನ್ನು ನಿಷೇಧಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Latest Indian news

Popular Stories