೨೮ ರಿಂದ ವಿದ್ಯಾರ್ಥಿಗಳಿಗೆ ಲಸಿಕಾಕರಣ ಅಭಿಯಾನ

ರಾಯಚೂರು, ಜೂ.೨೬ (ಕ.ವಾ):- ಮುಂಬರುವ ಜುಲೈ ಮಾಹೆಯಿಂದ ಕಾಲೇಜುಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಪದವಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಒಂದು ಅಭಿಯಾನದಂತೆ ಕೋವಿಡ್ ಲಸಿಕಾಕಾರಣ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.

ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗೆ ಕೋವಿಡ್-೧೯ ಲಸಿಕಾಕರಣವನ್ನು ಸಮರ್ಪಕವಾಗಿ ನಡೆಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. 

ಜಿಲ್ಲೆಯ ಎಲ್ಲಾ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಪದವಿ ಪೂರ್ವ, ಪದವಿ, ಎಂಜಿನಿಯರಿAಗ್, ಮೆಡಿಕಲ್, ಡಿಪ್ಲೋಮ್, ಐಟಿಐ, ವಿಶ್ವವಿದ್ಯಾಲಯಗಳು, ಅನುದಾನಿತ/ ಅನುದಾನ ರಹಿತ ಬಿ.ಎಡ್, ಡಿ.ಎಡ್ ಕಾಲೇಜುಗಳು, ಕಾನೂನು, ಬಿಸಿಎ, ಬಿಬಿಎಂ, ಸಿ.ಪಿ.ಎಡ್, ಬಿ.ಪಿ.ಎಡ್ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಕೋವಿಡ್ ಲಸಿಕಾಕರಣವನ್ನು ಸಮರ್ಪಕವಾಗಿ ನಡೆಸಲು ೨೦೨೧ರ ಜು.೨೮ ರಿಂದ ೩೦ರ ವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿನ ಎಲ್ಲಾ ೧೨+ ಕಾಲೇಜುಗಳ (ಪದವಿ/ಡಿಪ್ಲೋಮ್/ಐಟಿಐ, ಇತ್ಯಾದಿ) ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು/ ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗಳು ಕೋವಿಡ್-೧೯ ಲಸಿಕೆ ಪಡೆದುಕೊಳ್ಳಬೇಕು. ಕಾಲೇಜು ಆವರಣದಲ್ಲಿಯೇ (Woಡಿಞ Pisಛಿe ಗಿಚಿಛಿಛಿiಟಿಚಿಣioಟಿ Siಣe SಔP ಯಂತೆ) ಲಸಿಕಾಕರಣವನ್ನು ಆಯೋಜಿಸಿ ಅಭಿಯಾನ ಮಾದರಿಯಲ್ಲಿ ಕೋವಿಡ್ ಲಸಿಕಾಕರಣ ಸಂಪನ್ನಗೊಳಿಸಲಾಗುತ್ತದೆ, ಕಾಲೇಜು ಆವರಣದಲ್ಲಿ ನಡೆಯುವ ಲಸಿಕಾಕರಣದಲ್ಲಿ ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗೆ ಮಾತ್ರ ಅವಕಾಶವಿರುತ್ತದೆ. ಆದರೆ ಸಾರ್ವಜನಿಕರಿಗೆ ಕೋವಿಡ್-೧೯ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ವಿರುವುದಿಲ್ಲ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!