
Crime
ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಂಬಾನಿ,
ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ಬಿಡುಗಡೆ ಮಾಡಲಾಗಿದೆ. ಭಾರತದ ಶ್ರೀಮಂತರ ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಮತ್ತೆ ಉದ್ಯಮಿ ಗೌತಮ್ ಅದಾನಿಯನ್ನು ಹಿಂದಿಕ್ಕಿ ಶ್ರೀಮಂತ ಭಾರತೀಯ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದ್ದಾರೆ.
ಅದಾನಿ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ಜನವರಿಯಲ್ಲಿ ಹಿಂಡೆನ್ಬರ್ಗ್ ವರದಿ ಮಾಡಿದೆ. ಅದಾದ ಬಳಿಕ ಅದಾನಿ ಸಂಪತ್ತು ಗಣನೀಯವಾಗಿ ಕುಸಿಯುತ್ತಾ ಬಂದಿದೆ. ಇದರಿಂದಾಗಿ ಗೌತಮ್ ಅದಾನಿಯು ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದ್ದು, ಅಂಬಾನಿ ಮೊದಲ ಸ್ಥಾನಕ್ಕೆ ಏರಿದ್ದಾರೆ.
ಮೊದಲರೆಡು ಸ್ಥಾನವನ್ನು ಎಂದಿನಿಂತೆ ಅಂಬಾನಿ, ಅದಾನಿ ಪಡೆದರೆ, ಮೂರನೇ ಸ್ಥಾನದಲ್ಲಿ ಸೈರಸ್ ಎಸ್ ಪೂನವಾಲಾ ಮತ್ತು ಕುಟುಂಬ ಕಾಣಿಸಿಕೊಂಡಿದೆ. ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ, ನಿರಾಜ್ ಬಜಾಜ್ ಮತ್ತು ಕುಟುಂಬವು ಟಾಪ್ 10 ರ ಪಟ್ಟಿಗೆ ಮತ್ತೆ ಎಂಟ್ರಿ ನೀಡಿದೆ.




