Crime

ಅಸಮಾಧಾನ ಇಲ್ಲ ಎಂದ ಆನಂದಸಿಂಗ್

ಬೆಂಗಳೂರು,ಜ.25:- ಖಾತೆ ಮರು ಬದಲಾವಣೆ ಕುರಿತು ಯಾವುದೇ ಅತೃಪ್ತಿ, ಅಸಮಾಧಾನ ಇಲ್ಲ ಎಂದು ಸಚಿವ ಆನಂದಸಿಂಗ್ ಹೇಳಿದ್ದಾರೆ.
ಆನಂದಸಿಂಗ್ ಅವರಿಗೆ ಮುಂಚೆ ಪರಿಸರ ಖಾತೆ ಕೊಡಲಾಗಿತ್ತು. ನಂತರ ಈ ಖಾತೆಯನ್ನು ಸಚಿವ ಮಾಧುಸ್ವಾಮಿ ಅವರಿಗೆ ಕೊಡಲಾಯಿತು. ಮುಖ್ಯಮಂತ್ರಿಯವರು ತಮ್ಮ ಬಳಿ ಇದ್ದ ಮೂಲ ಸೌಕರ್ಯ ಖಾತೆಯನ್ನು ಸಚಿವ ಆನಂದಸಿಂಗ್ ಅವರಿಗೆ ನೀಡಿದ್ದಾರೆ. ಇದರ ಜೊತೆಗೆ ಮಾಧುಸ್ವಾಮಿ ಬಳಿ ಇದ್ದ ವಕ್ಫ್ ಮತ್ತು ಹಜ್ ಖಾತೆಯನ್ನೂ ಹೆಚ್ಚುವರಿಯಾಗಿ ಆನಂದಸಿಂಗ್ ಅವರಿಗೆ ನೀಡಲಾಗಿದೆ.
ಖಾತೆ ಬದಲಾವಣೆಯಿಂದ ಆನಂದಸಿಂಗ್ ಅಸಮಾಧಾನಗೊಂಡಿದ್ದು, ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೀಗ ಸ್ವತ: ಆನಂದಸಿಂಗ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅತೃಪ್ತಿ, ಅಸಮಾಧಾನ ಏನೂ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್ ಎಂದು ಆನಂದಸಿಂಗ್ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button