Crime

ಕೊಡಗು: ಎಲ್ಲಾ 15 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ

ಮಡಿಕೇರಿ ಅ.5 : ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಗಳಿಗೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ್ ಅವರು ಘೋಷಿಸಿದ್ದಾರೆ.
ಸಹಕಾರ ಯೂನಿಯನ್‍ನ 15 ನಿರ್ದೇಶಕರ ಸ್ಥಾನಗಳಿಗೆ ಅ.9ರಂದು ಚುನಾವಣೆ ನಡೆಯಬೇಕಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ನಾಮಪತ್ರಗಳ ವಾಪಸಾತಿಗೆ ಕೊನೆಯ ದಿನವಾಗಿದ್ದ ಅ.3ರಂದು ಕಣದಲ್ಲಿ ಕೇವಲ 15 ಮಂದಿ ಮಾತ್ರ ಉಳಿದಿದ್ದರಿಂದ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿರುವುದಾಗಿ ಅವರು ಹೇಳಿದ್ದಾರೆ.
ಜಿಲ್ಲೆಯ ಮಾರಾಟ, ಗ್ರಾಹಕರ ಸಹಕಾರ ಸಂಘಗಳು, ಸಹಕಾರ ಸ್ಟೋರ್ಸ್, ಜೇನು ಸಹಕಾರ ಸಂಘಗಳು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ಷೇತ್ರವುಳ್ಳ ಸಹಕಾರ ಸಂಘಗಳ ಕ್ಷೇತ್ರದಿಂದ ಬಿದ್ದಾಟಂಡ ಎ.ರಮೇಶ್ ಚಂಗಪ್ಪ ಮತ್ತು ನಂದಿನೆರವಂಡ ರವಿ ಬಸಪ್ಪ, ಸಹಕಾರ ಮಹಿಳಾ ಸಮಾಜ ಮತ್ತು ಮಹಿಳಾ ಸಹಕಾರ ಸಂಘ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳ ಕ್ಷೇತ್ರದಿಂದ ಮುಕ್ಕಾಟಿರ ಪ್ರೇಮಾ ಸೋಮಯ್ಯ ಅವರುಗಳು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಮೂರು ತಾಲೂಕುಗಳಲ್ಲಿರುವ ಮೇಲ್ಕಾಣಿಸಿದ ವರ್ಗಗಳಿಗೆ ಸೇರದ ಒತರ ಸಹಕಾರ ಸಂಸ್ಥೆಗಳ ಕ್ಷೇತ್ರದಿಂದ ಮಡಿಕೇರಿ ತಾಲೂಕಿನಿಂದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋಡಿರ ಎಂ.ತಮ್ಮಯ್ಯ, ಕೊಡಪಾಲು ಎಸ್.ಗಣಪತಿ, ವಾಂಚೀರ ಕೆ.ಅಜಯ್‍ಕುಮಾರ್ ವೀರಾಜಪೇಟೆ ತಾಲೂಕಿನಿಂದ ಚಿಮ್ಮಣಮಾಡ ಎಸ್.ಕೃಷ್ಣ ಗಣಪತಿ, ಪಟ್ಟಡ ಸಿ. ಮನು ರಾಮಚಂದ್ರ, ಪೆಮ್ಮಂಡ ವಿ.ಭರತ್, ಕೊಂಗಂಡ ಪಿ.ಮುದ್ದಯ್ಯ, ಸೋಮವಾರಪೇಟೆ ತಾಲೂಕಿನಿಂದ ಪಾಲಚಂಡ ಸಿ.ಅಚ್ಚಯ್ಯ, ಹೆಚ್.ಎನ್. ರಾಮಚಂದ್ರ, ನಾಪಂಡ ಉಮೇಶ್ ಉತ್ತಪ್ಪ ಹಾಗೂ ಪಂಜಿಪಳ್ಳ ಬಿ.ಯತೀಶ್ ಅವರುಗಳು ಆಯ್ಕೆಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button