ಬೆಂಗಳೂರು ಟ್ರಾಫಿಕ್ ಜಾಮ್: ತರಕಾರಿ ಸುಲಿದ ಮಹಿಳೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಕಿರಿಕಿರಿ ಮತ್ತೊಮ್ಮೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ತರಕಾರಿ ಸಿಪ್ಪೆ ಸುಲಿದ ಮಹಿಳೆಯೊಬ್ಬರ ಫೋಟೋವೊಂದು ವ್ಯಾಪಕ ವೈರಲ್ ಆಗಿದೆ.

ಬೆಂಗಳೂರಿನ ಈ ಟ್ರಾಫಿಕ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತಿದ್ದು, ಇತ್ತೀಚೆಗೆ ಟ್ರಾಫಿಕ್​​ನಲ್ಲಿ ಮಹಿಳೆಯೊಬ್ಬರು ತಮ್ಮ ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡುತ್ತಿರುವುದು ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಸಾರಿಗೆ ಸಿಬ್ಬಂದಿಯೊಬ್ಬರು ಟ್ರಾಫಿಕ್ ಜಾಮ್ ನಲ್ಲೇ ಊಟ ತಿಂದು ಮುಗಿಸಿದ್ದರು. ಈ ವಿಡಿಯೋ ಕೂಡ ವ್ಯಾಪಕ ವೈರಲ್ ಅಗಿತ್ತು. ಇದೀಗ ಅದೇ ರೀತಿಯಾಗಿ ಮಹಿಳೆಯೊಬ್ಬರು ಟ್ರಾಫಿಕ್​ನಲ್ಲಿ ಸಿಲುಕಿ ತರಕಾರಿ ಸುಲಿದಿದ್ದಾರೆ.

ಪ್ರಿಯಾ ಎಂಬ ಟ್ವಿಟರ್ ಬಳಕೆದಾರರೊಬ್ಬರು, ಟ್ರಾಫಿಕ್​ನಲ್ಲಿ ಸಿಲುಕಿದ್ದು, ಕಾರಿನಲ್ಲಿ ತರಕಾರಿಗಳ ಸಿಪ್ಪೆ ಸುಲಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ದಟ್ಟಣೆಯ ಟ್ರಾಫಿಕ್​​ ಸಮಯದಲ್ಲಿ ನಾವು ಉತ್ಪಾದಕರಾಗಿರುವುದು’ ಎಂದು ಬರೆದುಕೊಂಡಿದ್ದಾರೆ. 

ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಸುಮಾರು 50,000 ವೀಕ್ಷಣೆ ಮತ್ತು ಸುಮಾರು 100 ಕಾಮೆಂಟ್​​​​ಗಳು ಬಂದಿವೆ. ಬೆಂಗಳೂರಿನ ದಟ್ಟಣೆಯ ಟ್ರಾಫಿಕ್​​ ಪ್ರಯಾಣಿಸುವಾಗ ಕಲಿಯುವುದು, ಸಾಧಿಸುವುದು ಮತ್ತು ಬೆಳೆಯಲು ತುಂಬಾ ಇದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​​​​ ಮಾಡಿದ್ದಾರೆ.

ಓರ್ವ ಬಳಕೆದಾರರು, ಹಾಹಾ.. ಮೊಬೈಲ್ ಹೈಡ್ರೋಪೋನಿಕ್ಸ್ ಫಾರ್ಮ್​​ಗಳ ಕಲ್ಪನೆಯೊಂದಿಗೆ ಸ್ಟಾರ್ಟ್ ಅಪ್​​ ಕಂಪಗಳು ಬಂದರೂ ನನಗೆ ಆಶ್ಚರ್ಯವಾಗುವುದಿಲ್ಲ. ಬೆಂಗಳೂರಿನ ಈ ಟ್ರಾಫಿಕ್​ ನಡುವೆ ಸಿಲ್ಕ್ ಬೋರ್ಡ್​ನಿಂದ ಇಂದಿರಾನಗರವನ್ನು ತಲಪುವಷ್ಟರಲ್ಲಿ ಸಸ್ಯಗಳು ಬೆಳೆಯುತ್ತವೆ ಎಂದಿದ್ದಾರೆ. ಸಮಯದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಮತ್ತೋರ್ವ ಬಳಕೆದಾರರು ತಿಳಿಸಿದ್ದಾರೆ.

ಕ್ಲಾಸಿಕ್​ ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿದ್ದು, ಇದು ಬೆಂಗಳೂರಿನ ಟ್ರಾಫಿಕ್​ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ. 

ಅಂದಹಾಗೆ ವರದಿಯೊಂದರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್​​ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ. 

Latest Indian news

Popular Stories