ಬೆಳ್ತಂಗಡಿ: ಇಲ್ಲಿನ ಕುಕ್ಕೇಡಿಯಲ್ಲಿ ನಡೆದ ಪಟಾಕಿ ಸ್ಫೋಟ ಪ್ರಕರಣದಲ್ಲಿ ಸುಡುಮದ್ದು ತಯಾರಿಕಾ ಘಟಕದ ಮಾಲಕ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟಕದ ಮಾಲಕ ವೇಣೂರಿನ ಸೈಯದ್ ಬಶೀರ್(47) ಮತ್ತು ಮುಖ್ಯ ಕೆಲಸಗಾರ ಹಾಸನ ಮೂಲದ ಕಿರಣ್ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಇಬ್ಬರನ್ನೂ ವೇಣೂರು ಪೊಲೀಸರು ಬೆಳ್ತಂಗಡಿ ನ್ಯಾಯಧೀಶರ ಮನೆಗೆ ಹಾಜರುಪಡಿಸಿದ್ದಾರೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇಂದು ನ್ಯಾಯಾಲಕ್ಕೆ ಹಾಜರು ಪಡಿಸಲಾಗುತ್ತದೆ.