ಕಾಂಗ್ರೆಸ್ಸ್ನ ಬೆಂಬಲಿತ ಅಭ್ಯರ್ಥಿಗಳಾದ ಅಣ್ಣೀರ ಹರೀಶ್ ರವರಿಗೆ 12 ಮತ ಉಪಾಧ್ಯಕ್ಷ ಅಲಿರ ರಶೀದ್ 11 ಮತ.ಪೊನ್ನಂಪೇಟೆಯಲ್ಲೂ ಕೂಡ ಬಿಜೆಪಿ ಸದಸ್ಯರ ಅಡ್ಡ ಮತದಾನ
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಎರಡನೇ ಅವದಿಗೆ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಇಂದು ನಡೆದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಅಣ್ಣೀರ ಹರೀಶ್ ಉಪಾಧ್ಯಕ್ಷರಾಗಿ ಅಲಿರ ರಶೀದ್ ಆಯ್ಕೆಗೊಂಡಿದ್ದಾರೆ.
ಒಟ್ಟು 20 ಸದಸ್ಯರ ಬಲ ಇರುವ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 12 ಸದಸ್ಯ ಬಲವನ್ನು ಹೊಂದಿತ್ತು. ಕಾಂಗ್ರೆಸ್ ಎಂಟು ಸದಸ್ಯ ಬಲ ಹೊಂದಿದ್ದು. ಇಂದು ಮತದಾನ ಸಂದರ್ಭ 4 ಬಿಜೆಪಿ ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮ ಅಧ್ಯಕ್ಷರಾಗಿ ಆಯ್ಕೆಗೊಂಡ ಹನಿರ್ ಹರೀಶ್ ಅವರಿಗೆ ಹನ್ನೆರಡು ಮತಗಳು, ಉಪಾಧ್ಯಕ್ಷರಾದ ರಶೀದ್ ಅವರಿಗೆ 11 ಮತಗಳು ಒಂದು ಮತ ತಿರಸ್ಕಾರಗೊಂಡಿತು.