ಕೆರೆಗೋಡು ಹನುಮ ಧ್ವಜ ವಿವಾದ: ಜನರು ದ್ವೇಷ ರಾಜಕಾರಣಕ್ಕೆ ಬಲಿಯಾಗಬಾರದು :ವೆಲ್ಫೇರ್ ಪಾರ್ಟಿ

ಮಂಡ್ಯ ದ ಕೆರೆಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮದ್ವಜ ಕೆಳಗಿಳಿಸಿ ರಾಷ್ಟ್ರದ್ವಜ ಹಾರಿಸಿದ್ದನ್ನು ರಾಜಕೀಯ ಗೊಳಿಸಿ ಜನರ ದಾರಿತಪ್ಪಿಸುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವರ್ತನೆ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ರಾಷ್ಟ್ರ ದ್ವಜ ಹಾರಿಸಲು ಅನುಮತಿ ಪಡೆದು ಕೇಸರಿದ್ವಜ ಹಾರಿಸಲು ಪ್ರಯತ್ನಿಸುವುದು ಎಷ್ಟು ಸರಿ. ಮಾತ್ರವಲ್ಲ 60 ಅಡಿ ಎತ್ತರದ ಸ್ಥಂಭ ಕ್ಕೆ ಅನುಮತಿ ಪಡೆದು 108 ಅಡಿ ಎತ್ತರದ ಸ್ಥಂಭ ಸ್ಥಾಪಿಸಲಾಗಿದೆ ಎಂದು ತಿಳಿದು ಬರುತ್ತದೆ ಇದು ಸ್ಪಷ್ಟವಾದ ನಿಯಮ ಉಲ್ಲಂಘನೆಯಲ್ಲವೇ? ಸರ್ಕಾರದ ವಿರುದ್ಧ ಜನರನ್ನು ಈ ರೀತಿ ಎತ್ತಿ ಕಟ್ಟುವುದನ್ನು ಸಮರ್ಥಿಸಲಾಗದು. ಈ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ರಾಜಕೀಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆಯೇ ಎಂದು ಪ್ರಶ್ನಿಸಿದ ಅವರು ಸರಕಾರ ಜನರಿಗೆ ವಾಸ್ತವಾಂಶಗಳನ್ನು ತಿಳಿಸಬೇಕು. ಜನರು ನಿಜಾಂಶಗಳನ್ನು ಅರಿತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಬೇಕು. ದ್ವೇಷ ರಾಜಕೀಯಕ್ಕೆ ಬಲಿಯಾಗಬಾರದು ಎಂದೂ ಅವರು ಹೇಳಿದರು.

Latest Indian news

Popular Stories