Crime

ಜೀವಿತಪುತ್ರಿಕ ಹಬ್ಬದ ಹಿನ್ನೆಲೆಯಲ್ಲಿ ನದಿಗಳಿಗೆ, ಹಳ್ಳಕೊಳ್ಳಗಳಿಗೆ ಸ್ನಾನ ಮಾಡಲು ತೆರಳಿದ್ದ 22 ಮಂದಿ ಮೃತ್ಯು

ಬಿಹಾರ್ : ಜೀವಿತಪುತ್ರಿಕ ಹಬ್ಬದ ಹಿನ್ನೆಲೆಯಲ್ಲಿ ನದಿಗಳಿಗೆ,
ತಮ್ಮ ಮಕ್ಕಳ ಒಳಿತಿಗಾಗಿ ಹಳ್ಳಕೊಳ್ಳಗಳಿಗೆ ಸ್ನಾನ ಮಾಡಲು ತೆರಳಿದ್ದ 22 ಮಂದಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.

ರಾಜ್ಯದ ವಿವಿಧೆಡೆ ಪ್ರತ್ಯೇಕ ಘಟನೆಗಳಲ್ಲಿ ಈ ಸಾವುಗಳು ಸಂಭವಿಸಿದ್ದು, ಅವರಲ್ಲಿ ಬಹುತೇಕರು ಹಬ್ಬದ ಹಿನ್ನೆಲೆಯಲ್ಲಿ ನದಿಗಳಿಗೆ ಸ್ನಾನಕ್ಕೆಂದು ತೆರಳಿದ್ದವರೇ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಭೋಜಪುರದಲ್ಲಿ 5 ಮಂದಿ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಜೆಹನ್‌ಬಾದ್‌ನಲ್ಲಿ 4 ಮಂದಿ, ಪಾಟ್ನಾ ಮತ್ತು ರೋಹತ್ಸ್ನಲ್ಲಿ ತಲಾ ಮೂವರು, ದರ್ಭಾಂಗ ಹಾಗೂ ನವಾದದಲ್ಲಿ ತಲಾ ಇಬ್ಬರು ಮತ್ತು ಕೈಮೂರ್‌, ಮೇಧಪುರ್‌, ಔರಂಗಾಬಾದ್‌ನಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button