ನವದೆಹಲಿ: 13 ವರ್ಷದ ಬಾಲಕನೊಬ್ಬ ತನ್ನ ಮನೆಯವರು ಕೇಕ್ ತಂದಿಲ್ಲ ಎಂದು ಬೇಸರಿಸಿ ಮನೆ ಬಿಟ್ಟು ಓಡಿ ಹೋಗಿದ್ದ.ಆತನನ್ನು ಪತ್ತೆಹಚ್ಚಿದ ಪೊಲೀಸ್ ತಂಡವು ಹುಡುಗನ ಸಂಬಂಧಿಕರ ಸಮ್ಮುಖದಲ್ಲಿ ಹುಟ್ಟುಹಬ್ಬದ ಕೇಕ್ ಅನ್ನು ತರಿಸಿ ಹುಡುಗನ ಬರ್ತ್ ಡೇ ಆಚರಿಸಿ ಆತನಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.
ಅಕ್ಟೋಬರ್ 4 ರಂದು, ಘಾಟ್ಕೋಪರ್ ಮೂಲದ ಕುಟುಂಬವು ತಮ್ಮ 13 ವರ್ಷ ವಯಸ್ಸಿನ ಮಗ ಮನೆಯಿಂದ ಸಂಜೆ 4 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಬಾಲಕ ತನ್ನ ತಾಯಿ ಶೈದಾ ಶಾಖ್ (42) ಮತ್ತು ಆಕೆಯ ಪೋಷಕರೊಂದಿಗೆ ಇದ್ದನು.ಅವರ ತಂದೆ ತೀರಿ ಹೋಗಿದ್ದರು.