ಕೊಚ್ಚಿ:ಗೂಗಲ್ ಮ್ಯಾಪ್ ಅನ್ನು ಅನುಸರಿಸಿಕೊಂಡು ಬಂದ ಕಾರೊಂದು ಪೆರಿಯಾರ್ ನದಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ವೈದ್ಯರು ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದು ನಗರದ ಆಸ್ಪತ್ರೆಗೆ ಸೇರಿಸಲಾಗಿದೆ.
ಮೃತಪಟ್ಟವರನ್ನು ಅದ್ವೈತ್ (29) ಮತ್ತು ಅಜ್ಮಲ್ (29) ಎಂದು ಗುರುತಿಸಲಾಗಿದೆ.ನಗರದ ಪೆರಿಯಾರ್ ನದಿ ಬಳಿಯ ರಸ್ತೆಯಲ್ಲಿ ತಡರಾತ್ರಿ ಕಾರ್ನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಮಳೆ ಸುರಿಯುತ್ತಿದ್ದುದರಿಂದ ರಸ್ತೆ ಜಲಾವೃತಗೊಂಡಿತ್ತು. ಆಗ ದಾರಿ ಕಾಣಲೆಂದು ಗೂಗಲ್ ಮ್ಯಾಪ್ ಅನುಸರಿಸಿ ಕಾರು ಚಲಾಯಿಸಿದ್ದು ಕಾರು ನೀರಿಗೆ ಬಿದ್ದಿದೆ.ನದಿ ನೋಡಿ ರಸ್ತೆಯೇ ಇರಬೇಕೆಂದು ಭಾವಿಸಿ ಕಾರು ಚಲಾಯಿಸಿದ್ದರಿಂದ ದುರಂತ ಸಂಭವಿಸಿದೆ.