ಕೋವಿಡ್-೧೯ ವ್ಯಾಕ್ಸಿನೇಷನ್ ಕುರಿತು ಕಮಠಾಣದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮ

ಬೀದರ, ಜುಲೈ. ೧೬ಃ ಗುರುನಾನಕ ವಿಜ್ಞಾನ ಮತ್ತು ವಾಣ ಜ್ಯ ಪದವಿ ಮಹಾವಿದ್ಯಾಲಯ, ಶಾಂತಿಶೇಶ್ವರಿ ಸ್ವಯಂ ಸೇವಾ ಸಂಸ್ಥೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆ ಕಮಠಾಣಾ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೬ ರಂದು ಬೆಳಗ್ಗೆ ತಾಲೂಕಿನ ಕಮಠಾಣಾ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಕೋವಿಡ್-೧೯ ವ್ಯಾಕ್ಸಿನೇಷನ್ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬೀದರ ತಹಸೀಲ್ದಾರ ಶ್ರೀಮತಿ ಗಂಗಾದೇವಿ ಎಚ್. ಅವರು, ಜಿಲ್ಲೆಯಲ್ಲಿ ಕೋವಿಡ್-೧೯ ೨ನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೂ ಸಾರ್ವಜನಿಕರು ತಪ್ಪದೇ ಕೋವಿಡ್ ನಿಯಮಗಳು ಪಾಲಿಸಿಕೊಂಡು ಕೋವಿಡ್-೧೯ ೩ನೇ ಅಲೆ ತಡೆಯಲು ಎಲ್ಲರೂ ತಪ್ಪದೇ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ಸುವರ್ಣಾ ಅವರು ಮಾತನಾಡುತ್ತ, ಕೋವಿಡ್-೧೯ ವಿಶ್ವದಲ್ಲಿ ಅಲ್ಲೊಲ-ಕಲ್ಲೋಲ ಸೃಷ್ಟಿಸಿದಾಗ, ಕೋವಿಡ್-೧೯ ತಡೆಯಲು ವ್ಯಾಕ್ಸಿನೇಷನ್ ಇರಲಿಲ್ಲ. ಈಗ ವ್ಯಾಕ್ಸಿನೇಷನ್ ಬಂದರೂ ಜನರು ವ್ಯಾಕ್ಸಿನೇಷನ್ ಮಾಡಿಕೊಳ್ಳದಿರುವುದು ಖೇದಕರ ಸಂಗತಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರಾದ ರವೀಂದ್ರ ಚಟ್ನಳ್ಳಿ ಅವರು, ಕೋವಿಡ್-೧೯ ಕರೋನಾ ವೈರಸ್ ಮಹಾಮಾರಿಗೆ ಬಲಿಯಾದ ಕುಟುಂಬದವರಿಗೆ ಕೋವಿಡ್-೧೯ ತಿವ್ರತೆ ಬಗ್ಗೆ ಚೆನ್ನಾಗಿ ಅರಿವು ಇದೆ. ಆದರೆ, ಜನರು ವ್ಯಾಕ್ಸಿನೇಷನ್ ಬಂದರೂ ಸಹ ಕೋವಿಡ್-೧೯ ವ್ಯಾಕ್ಸಿನ್ ತೆಗೆದುಕೊಳ್ಳದಿರುವುದು ತುಂಬಾ ಬೇಜಾರದ ವಿಷಯವಾಗಿದೆ ಎಂದರು.
ಬೀದರ ತಾಲೂಕಾ ವೈದ್ಯಾಧಿಕಾರಿ ಡಾ. ಸಂಗಾರೆಡ್ಡಿ ಅವರು ಮಾತನಾಡುತ್ತ, ಮೊದಲನೇ ಅಲೆ ೨೦೨೦ರಲ್ಲಿ ಬಂತು. ಎರಡನೇ ಅಲೆ ೨೦೨೧ರಲ್ಲಿ ಬಂತು. ಮೂರನೇ ಅಲೆ ಬರುವುದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬೀದರ ತಾಲೂಕಿನಲ್ಲಿ ೧.೬೦ ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಒಂದೇ ದಿನ ೩೭ ಸಾವಿರ ಮತ್ತು ೮,೭೦೦ ಜನರಿಗೆ ವ್ಯಾಕ್ಸಿನೇಷನ್ ಮಾಡಿ ಇತಿಹಾಸ ಮಾಡಲಾಗಿದೆ ಎಂದರು.
ವಿಲಾಸರಾವ ಕುಲಕಣ ð ಅವರು ಮಾತನಾಡುತ್ತ, ಕಮಠಾಣಾ ಗ್ರಾಮದಲ್ಲಿ ಸುಮಾರು ೧೮ ರಿಂದ ೨೦ ಸಾವಿರ ಜನಸಂಖ್ಯೆ ಇದ್ದು, ಇಲ್ಲಿ ಕೇವಲ ೧, ೩೦೦ ಜನರು ವ್ಯಾಕ್ಸಿನೇಷನ್ ಪಡೆದಿದ್ದಾರೆ. ಉಳಿದ ೧೮ ಸಾವಿರ ಜನರಿಗೆ ವ್ಯಾಕ್ಸಿನೇಷನ್ ಮಾಡಬೇಕಾಗಿದೆ. ಕಮಠಾಣಾ ಗ್ರಾಮದಲ್ಲಿ ಕೋವಿಡ್-೧೯ ವ್ಯಾಕ್ಸಿನೇಷನ್ ಜನಜಾಗೃತಿ ಜಾಥಾ ಹಮ್ಮಿಕೊಂಡಿರುವ ವಿವಿಧ ಸಂಘ-ಸAಸ್ಥೆಗಳಿಗೆ ಅಭಿನಂದನೆಗಳು ಎಂದರು.
ಶಾAತಿಶೇಶ್ವರಿ ಸ್ವಯಂ ಸೇವಾ ಸಂಸ್ಥೆ ಕಾರ್ಯದರ್ಶಿ ಬಸಯ್ಯಾ ಸ್ವಾಮಿ ಅವರು ಮಾತನಾಡುತ್ತ, ಮೀರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಉದ್ಯಾನವನ ಹಾಗೂ ಸಸಿ ನೆಡಲು ಎಲ್ಲ ರೀತಿಯ ಸಹಾಯ-ಸಹಕಾರ ಮಾಡಲಾಗುವುದು. ಕಮಠಾಣದ ಎಲ್ಲ ಜನರಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದರು.
ಗುರುನಾನಕ ವಿಜ್ಞಾನ ಮತ್ತು ವಾಣ ಜ್ಯ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿನಿ ಕೋವಿಡ್-೧೯ ಕರೋನಾ ವೈರಸ್ ಮಹಾಮಾರಿಯಿಂದ ಆಗುವ ಸಂಕಷ್ಟಗಳ ಬಗ್ಗೆ ಹಾಗೂ ಕೋವಿಡ್ ತಡೆಯಲು ಮಾಡಬೇಕಾದ ನಿಯಮಗಳ ಬಗ್ಗೆ ಜನರ ಮನಮುಟ್ಟುವಂತೆ ತಿಳಿಹೇಳಿದರು.
ಕಮಠಾಣಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಕರಿಮಾ ಬೇಗಂ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ವಿಜಯಕುಮಾರ ಮೈನ್ನಳ್ಳಿ, ಪಿಡಿಓ ಶಂಕರರಾವ ಕುತ್ತಾಬಾದೆ, ಗ್ರಾ.ಪಂ. ಸದಸ್ಯರು, ಗುರುನಾನಕ ವಿಜ್ಞಾನ ಮತ್ತು ವಾಣ ಜ್ಯ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಮೋರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ನಂತರ ಕಮಠಾಣಾ ಗ್ರಾಮ ಪಂಚಾಯತದಿAದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು.

Latest Indian news

Popular Stories