
Crime
ನಗರದಲ್ಲಿ ರಾಶಿಗಟ್ಟಲೆ ಬೀಳುವ ಪ್ಲಾಸ್ಟಿಕ್ ಯುಕ್ತ ಕಸವನ್ನು ತಡೆದು ಪರಸರ ಸ್ನೇಹಿ ದಸರಾ ಆಚರಣೆ
ಮೈಸೂರು : ದಸರಾ ನಂತರ ನಗರದಲ್ಲಿ ರಾಶಿಗಟ್ಟಲೆ ಬೀಳುವ ಪ್ಲಾಸ್ಟಿಕ್ ಯುಕ್ತ ಕಸವನ್ನು ತಡೆದು ಪರಸರ ಸ್ನೇಹಿ ದಸರಾ ಆಚರಣೆ ಮಾಡುವ ಶಪಥವನ್ನು ಜಿಲ್ಲಾಡಳಿತ ಮಾಡಿದೆ.
ಇದು ಸಕಾರವಾಗಬೇಕಾದರೆ ಸ್ಥಳೀಯರು ಮತ್ತು ಹೊರಗಿನಿಂದ ಬರುವ ಪ್ರವಾಸಿಗರು ಕೈಜೋಡಿಸಬೇಕಿದೆ.ಇದುವರೆಗೆ ದಸರಾವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸುವ ಬಗ್ಗೆ ಮಾತ್ರ ಆಲೋಚಿಸಲಾಗುತ್ತಿತ್ತು. ಆದರೆ ಈ ಬಾರಿ ಮೈಸೂರು ನಗರವು ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿರುವುದರಿಂದ ದಸರಾವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆದರೂ ನಗರದಲ್ಲಿ ಪ್ಲಾಸ್ಟಿಕ್ ಗಳನ್ನೊಳಗೊಂಡ ಕಸಗಳು ರಾಶಿಗಳು ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ದಸರಾ ವೇಳೆ ಪ್ಲಾಸ್ಟಿಕ್ ಗಳ ಬಳಕೆಯನ್ನು ತಡೆಗಟ್ಟದೆ ಹೋದರೆ ನಗರ ಮಾತ್ರವಲ್ಲದೆ, ಪ್ರವಾಸಿ ತಾಣಗಳು ಕಸಮಯವಾಗುವ, ಪ್ಲಾಸ್ಡಿಕ್ ರಾಶಿ ಬೀಳುವ ಸಾಧ್ಯತೆ ಹೆಚ್ಚಿದೆ.ಪ್ಲಾಸ್ಟಿಕ್ ಯುಕ್ತ ಕಸವನ್ನು ತಡೆದು ಪರಸರ ಸ್ನೇಹಿ ದಸರಾ ಆಚರಣೆ ಮಾಡುವ ಶಪಥವನ್ನು ಜಿಲ್ಲಾಡಳಿತ ಮಾಡಿದೆ.




